ಖಾಲಿ ನಿವೇಶನದಲ್ಲಿ ಮೃತದೇಹ ಪತ್ತೆ

Dead body found in empty site

17-11-2017

ಬೆಂಗಳೂರು: ವಿದ್ಯಾರಣ್ಯಪುರಂ ಮುಖ್ಯರಸ್ತೆಯ ಖಾಲಿ ನಿವೇಶನವೊಂದರ ಬಳಿ ಸೆಕ್ಯೂರಿಟಿ ಗಾರ್ಡ್ ಒಬ್ಬರ ಎದೆಗೆ ಚಾಕುವಿನಿಂದ ಇರಿದು, ಭೀಕರವಾಗಿ ಕೊಲೆ ಮಾಡಿರುವ ದುಷ್ಕರ್ಮಿಗಳು ಪರಾರಿಯಾಗಿರುವ ದುರ್ಘಟನೆ ನಡೆದಿದೆ. ಚಲ್ಲಘಟ್ಟದ ಜಾನ್‍ಜೋಶಿ (28) ಮೃತ ದುರ್ದೈವಿ. ಸಿಎಂಜಿ ಕಂಪನಿಯಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿದ್ದ ಜಾನ್‍ಜೋಶಿ ಇತ್ತೀಚೆಗೆ ಕೆಲಸ ಬಿಟ್ಟಿದ್ದರು ಎಂದು ತಿಳಿದು ಬಂದಿದೆ.

ಜೋಶಿ ಅವರ ಎದೆಗೆ ಚಾಕುವಿನಿಂದ ಇರಿದು, ಕೊಲೆ ಮಾಡಿ ಮೃತದೇಹವನ್ನು ದುಷ್ಕರ್ಮಿಗಳು ವಿದ್ಯಾರಣ್ಯಪುರಂ ಮುಖ್ಯರಸ್ತೆಯ ಖಾಲಿ ನಿವೇಶನವೊಂದರ ಬಳಿ ಎಸೆದು ಪರಾರಿಯಾಗಿದ್ದಾರೆ.

ಇಂದು ಬೆಳಿಗ್ಗೆ ಮೃತದೇಹವನ್ನು ನೋಡಿದ ಸ್ಥಳೀಯರು ನೀಡಿದ ಮಾಹಿತಿಯಾಧರಿಸಿ ಸ್ಥಳಕ್ಕೆ ಧಾವಿಸಿದ ವಿದ್ಯಾರಣ್ಯಪುರಂ ಪೊಲೀಸರು ಪ್ರಕರಣ ದಾಖಲಿಸಿ ಮೃತದೇಹದ ಗುರುತು ಪತ್ತೆಹಚ್ಚಿ ಕೊಲೆಗೈದ ದುಷ್ಕರ್ಮಿಗಳಿಗಾಗಿ ತೀವ್ರ ಶೋಧ ನಡೆಸಿದ್ದಾರೆ. ರಾತ್ರಿ ಸುಲಿಗೆಗೆ ಬಂದವರು ಅಡ್ಡಗಟ್ಟಿ ಕೊಲೆ ಮಾಡಿರಬಹುದು ಅಥವಾ ವೈಯಕ್ತಿಕ ದ್ವೇಷಕ್ಕೆ ಕೊಲೆ ನಡೆದಿರಬಹುದಾ ಈ ಎರಡೂ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದೇವೆ ಎಂದು ಡಿಸಿಪಿ ಎಸ್. ಗಿರೀಶ್ ತಿಳಿಸಿದ್ದಾರೆ.

 


ಸಂಬಂಧಿತ ಟ್ಯಾಗ್ಗಳು

Crime Horrific murder ಸೆಕ್ಯೂರಿಟಿ ದುಷ್ಕರ್ಮಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ