ಮಿಲನಕ್ಕೆ ನೋ ಎಂದಿದ್ದಕ್ಕೆ ಕೊಲೆ..!

No sex: women murder

17-11-2017

ಬೆಂಗಳೂರು: ಮೊದಲು ಅನೈತಿಕ ಸಂಬಂಧವಿಟ್ಟುಕೊಂಡಿದ್ದ ನಾದಿನಿ ಇತ್ತೀಚಿಗೆ ಲೈಂಗಿಕ ಕ್ರಿಯೆಗೆ ನಡೆಸಲು ನಿರಾಕರಿಸಿದ್ದರಿಂದ ರೊಚ್ಚಿಗೆದ್ದು, ಆಕೆಯನ್ನು ಮಚ್ಚಿನಿಂದ ಕೊಚ್ಚಿ ಕೊಲೆಗೈದು, ನಂತರ ಪೊಲೀಸರ ಭಯಕ್ಕೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಭಾವನನ್ನು ಕೆ.ಆರ್.ಪುರಂ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಚೆನ್ನಸಂದ್ರದ ಗಾರೆ ಮೇಸ್ತ್ರಿ ವಿನಾಯಕ್ ರೆಡ್ಡಿ(50) ಎಂದು ಬಂಧಿತ ಆರೋಪಿಯನ್ನು ಗುರುತಿಸಲಾಗಿದೆ. ಕಳೆದ ಬುಧವಾರ ಮಧ್ಯಾಹ್ನ ಚಿಕ್ಕದೇವಸಂದ್ರದಲ್ಲಿ ನಾದಿನಿ ಸುಮತಿ(30)ಎಂಬಾಕೆಯನ್ನು ವಿನಾಯಕ ರೆಡ್ಡಿ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದನು.

ಕೋಲಾರದ ನಾರಾಯಣಪುರ ಸಂಬಂಧಿಕರ ಮನೆಯಲ್ಲಿ ತಲೆ ಮರೆಸಿಕೊಂಡಿದ್ದ ಆರೋಪಿಗಾಗಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಶೋಧ ನಡೆಸಿದ್ದರು, ಪೊಲೀಸರು ಹಿಂದೆ ಬಿದ್ದಿರುವುದರಿಂದ ಆತಂಕಗೊಂಡ ವಿನಾಯಕ್ ರೆಡ್ಡಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಅಲ್ಲಿಗೆ ತೆರಳಿದ ಪೊಲೀಸರು ಆರೋಪಿಯನ್ನುಬಂಧಿಸಿ ವಿಚಾರಣೆ ನಡೆಸಿದಾಗ ಸುಮತಿಯನ್ನು ನಾನೇ ನನ್ನ ಸೋದರ ಸಂಬಂಧಿಯಾಗಿದ್ದ ವೆಂಕಟೇಶ್‍ ರೆಡ್ಡಿಗೆ ವಿವಾಹ ಮಾಡಿಕೊಟ್ಟಿದ್ದೆ. ಆಕೆ ಮೊದಲು ನನ್ನೊಂದಿಗೆ ಅನೈತಿಕ ಸಂಬಂಧ ವಿಟ್ಟುಕೊಂಡಿದ್ದಳು. ಆದರೆ ಇತ್ತೀಚಿಗೆ ನನ್ನ ಜೊತೆಗಿನ ಸಂಬಂಧ ನಿರಾಕರಿಸಿ ಅಂತರ ಕಾಯ್ದುಕೊಳ್ಳಲು ಯತ್ನಿಸುತ್ತಿದ್ದಳು ಆದರೂ ನಾನು ನ.15ರಂದು ಮಧ್ಯಾಹ್ನ ಮನೆಯಲ್ಲಿ ಸುಮತಿ ಒಂಟಿಯಾಗಿದ್ದ ಹೋಗಿ ಮಿಲನಕ್ಕೆ ಹಲವು ಬಾರಿ ಪ್ರಯತ್ನ ಮಾಡಿದ್ದು, ಆಕೆ ನಿರಾಕರಿಸಿದ್ದಕ್ಕೆ ಆಕ್ರೋಶಗೊಂಡು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದಾಗಿ ಬಾಯ್ಬಿಟ್ಟಿದ್ದಾನೆ.

ಪೊಲೀಸರಿಗೆ ಸಿಕ್ಕಿಬೀಳುವ ಭಯದಲ್ಲಿ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದಾಗಿ ತಿಳಿಸಿದ್ದು, ಆರೋಪಿಯನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ವೈಟ್‍ಫೀಲ್ಡ್ ಡಿಸಿಪಿ ಅಬ್ದುಲ್ ಅಹದ್ ತಿಳಿಸಿದ್ದಾರೆ.

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ