ಮೇಲುಸೇತುವೆ ಮೇಲಿಂದ ಬಿದ್ದ ಕ್ಯಾಂಟರ್

Lorry fallen from flyover

17-11-2017

ಬೆಂಗಳೂರು: ಆಂಧ್ರಪ್ರದೇಶದಿಂದ ನಗರಕ್ಕೆ ಕೋಳಿಗಳನ್ನು ತುಂಬಿಕೊಂಡು ಬರುತ್ತಿದ್ದ ಕ್ಯಾಂಟರ್ ಯಶವಂತಪುರ ಮೇಲ್ಸೇತುವೆ ರಸ್ತೆಯಿಂದ ಕೆಳಗೆ ಬಿದ್ದು ಮೂವರು ಗಾಯಗೊಂಡು ನೂರಾರು ಕೋಳಿಗಳು ಮೃತಪಟ್ಟಿರುವ ದುರ್ಘಟನೆ ನಡೆದಿದೆ.

ಮೇಲುಸೇತುವೆಯಿಂದ ಕೆಳಗೆಬಿದ್ದ ರಭಸಕ್ಕೆ ಕ್ಯಾಂಟರ್‍ ನಲ್ಲಿದ್ದ ಆಂಧ್ರಪ್ರದೇಶದ ಕರ್ನೂಲ್‍ನ ಶಬ್ಬೀರ್, ಇಬ್ರಾಹಿಂ ಹಾಗೂ ಅಲ್ತಾಫ್ ಎಂದು ಗಾಯಗೊಂಡವರನ್ನು ಗುರುತಿಸಲಾಗಿದೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು ಅವರಲ್ಲಿ ಇಬ್ರಾಹಿಂ ಸ್ಥಿತಿ ಗಂಭೀರವಾಗಿದೆ. ಕರ್ನೂಲಿನಿಂದ ಶಿವಾಜಿನಗರಕ್ಕೆ ಬೆಳಿಗ್ಗೆ 7.15ರ ವೇಳೆ ಕೋಳಿಗಳನ್ನು ತುಂಬಿಕೊಂಡು ವೇಗವಾಗಿ ಬರುತ್ತಿದ್ದ ಕ್ಯಾಂಟರ್ ಯಶವಂತಪುರ ಮೇಲ್ಸೇತುವೆ ರಸ್ತೆಯಲ್ಲಿ ಮುಂದೆ ಸಂಚಾರ ದಟ್ಟಣೆ ಇದ್ದರಿಂದ ಚಾಲಕ ಬ್ರೇಕ್ ಹಾಕಲು ಹೋಗಿ ನಿಯಂತ್ರಣ ಸಿಗದೆ ಕ್ಯಾಂಟರ್ ಕೆಳಗೆ ಬಿದ್ದು ಈ ದುರ್ಘಟನೆ ಸಂಭವಿಸಿದೆ.

ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಯಶವಂತಪುರ ಸಂಚಾರ ಪೊಲೀಸರು ಕ್ಯಾಂಟರ್ ಅನ್ನು ಜೆಸಿಬಿ ಮೂಲಕ ಮೇಲೆತ್ತಿ ಗಾಯಾಳುಗಳನ್ನು ಹತ್ತಿರದ ಖಾಸಗಿ ಅಸ್ಪತ್ರೆಗೆ ದಾಖಲು ಮಾಡಿದ್ದಾರೆ. ಅಪಘಾತದಲ್ಲಿ ಲಾರಿಯಲ್ಲಿದ್ದ ಶೇ.25ರಷ್ಟು ಕೋಳಿಗಳು ಮೃತಪಟ್ಟಿದ್ದು ಪ್ರಕರಣ ದಾಖಲಿಸಲಾಗಿದೆ ಎಂದು ಇನ್ಸ್‍ ಪೆಕ್ಟರ್ ಸದಾನಂದ ತಿಳಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Bengaluru Flyover ಕ್ಯಾಂಟರ್ ಮೇಲುಸೇತುವೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ