ಬೆಂಗಳೂರಲ್ಲಿ ಲಿಂಗಾಯತ ಬೃಹತ್ ಸಮಾವೇಶ

Lingayats Massive Convention

17-11-2017

ಬೆಂಗಳೂರು: ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರಕ್ಕೆ ಸಂಬಂಧಿಸಿದಂತೆ, ಬೆಂಗಳೂರಿನಲ್ಲಿ ಇದೇ ತಿಂಗಳ19 ರಂದು ಬೃಹತ್ ಸಮಾವೇಶ ಆಯೋಜನೆ ಮಾಡಲಾಗಿದ್ದು, ಈ ಕುರಿತಂತೆ ಡಾ.ಮಾತೆ ಮಹಾದೇವಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರಗತಿಪರ ಸಾಹಿತಿಗಳು ಈ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ, ನಟ ಚೇತನ್,ವಿನಯ್ ಕುಲಕರ್ಣಿ, ಬಸವರಾಜ ಹೊರಟ್ಟಿ,ಮಲ್ಲಿಕಾರ್ಜುನ ಖೂಬಾ, ಬಸವರಾಜ ರಾಯ ರೆಡ್ಡಿ ಹಾಗೂ ಕೆಎಸ್ ಭಗವಾನ್ ಭಾಗವಹಿಸುವ ಸಾಧ್ಯತೆ ಇದೆ ಎಂದಿದ್ದಾರೆ.

ಪ್ರತ್ಯೇಕ ಧರ್ಮದ ಕುರಿತು ನಿರ್ಣಯವನ್ನು ಸಮಾವೇಶದಲ್ಲಿ ತೆಗೆದುಕೊಳ್ಳುವ ಸಾಧ್ಯತೆ ಇದೆ ಎಂದು, ಮಾತೆಮಹಾದೇವಿ ತಿಳಿಸಿದರು. ನವೆಂಬರ್ 19ನೇ ತಾರೀಖು ನ್ಯಾಷನಲ್ ಕಾಲೇಜ್ ಮೈದಾನದಲ್ಲಿ ಬೃಹತ್ ಸಮಾವೇಶ ನಡೆಯಲಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಬಸವ ತತ್ವ ಅನುಯಾಯಿಗಳು ಭಾಗವಹಿಸಲಿದ್ದಾರೆ ಎಂದರು.

1995 ಜೂನ್ 20 ರಂದು ಲಿಂಗಾಯತ ಮಹಾಸಭಾ ಸಂಸ್ಥೆ ಸ್ಥಾಪಿಸಲಾಯಿತು, 22 ವರ್ಷದ ವಾರ್ಷಿಕೋತ್ಸವ ಹಿನ್ನೆಲೆ ನಡೆಯಲಿರುವ ಸಮಾವೇಶದಲ್ಲಿ ಗೃಹ ಸಚಿವ ರಾಮಲಿಂಗಾರೆಡ್ಡಿ  ವಸತಿ ಸಚಿವ ಎಂ‌ ಕೃಷ್ಣಪ್ಪ, ಬೇಲಿಮಠದ ಶಿವರುದ್ರ ಸ್ವಾಮೀಜಿ ಸೇರಿದಂತೆ ಹಲವಾರು ಪ್ರಗತಿಪರ ಚಿಂತಕರು ಭಾಗವಹಿಸುವ ಸಾಧ್ಯತೆ ಇದೆ ಎಂದು ಹೇಳಿದರು.

ಲಿಂಗಾಯತ ಧರ್ಮ ವೈಚಾರಿಕ ಧರ್ಮ‌, ಪ್ರಗತಿಪರ ಧರ್ಮ,ಇದಕ್ಕೆ ಸಾಂವಿಧಾನಿಕ ನೆಲೆಗಟ್ಟಿನಲ್ಲಿ ಮಾನ್ಯತೆ ಅಗತ್ಯ ವಿದೆ, ಆದ್ದರಿಂದ ಲಿಂಗಾಯತ ಧರ್ಮಕ್ಕೆ ಮಾನ್ಯತೆ ಸಿಗಬೇಕು ಎಂದು ರಾಜ್ಯ ಸರ್ಕಾರ  ಕೇಂದ್ರ ಸರ್ಕಾರಕ್ಕೆ ಮನವಿ ಮಾಡಬೇಕು ಎಂದರು.

 


ಸಂಬಂಧಿತ ಟ್ಯಾಗ್ಗಳು

Mate Mahadevi Lingayat ಪ್ರತ್ಯೇಕ ಧರ್ಮ ಸಮಾವೇಶ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ