ತುಮಕೂರಿನ 750 ಕ್ಲಿನಿಕ್ ಗಳು ಬಂದ್ !

750 clinics bandh

17-11-2017

ತುಮಕೂರು: ಖಾಸಗಿ ಆಸ್ಪತ್ರೆಗಳ ವೈದ್ಯರ ಮುಷ್ಕರದಿಂದ, ತುಮಕೂರಿನಲ್ಲಿ ಇಂದೂ ಕೂಡ ಖಾಸಗಿ ಆಸ್ಪತ್ರೆಗಳು ಬಾಗಿಲು ತೆರೆಯದಿದ್ದು, ರೋಗಿಗಳ ಪರದಾಟ ಮುಂದುವರೆದಿದೆ. ಓಪಿಡಿ ಸೌಲಭ್ಯ ಸ್ಥಗಿತಗೊಳಿಸಿದ್ದು, ತುಮಕೂರು ನಗರದ 50 ಖಾಸಗಿ ಆಸ್ಪತ್ರೆ, 250 ಕ್ಲಿನಿಕ್ ಗಳು ಸೇರಿದಂತೆ, ಜಿಲ್ಲಾದ್ಯಂತ ಸುಮಾರು 180 ನರ್ಸಿಂಗ್ ಹಾಗೂ 750 ಕ್ಲಿನಿಕ್ ಗಳನ್ನು ಬಂದ್ ಮಾಡಲಾಗಿದೆ. ‌ಜಿಲ್ಲೆಯ ಸುಮಾರು 1200 ಖಾಸಗಿ ವೈದ್ಯರು ಮುಷ್ಕರದಲ್ಲಿ ಭಾಗಿಯಾಗಿದ್ದಾರೆ.

ಇದರ ನಡುವೆಯೇ ಮುಷ್ಕರದಿಂದ, ಇಂದು ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ತುಮಕೂರಿನ ಕೊರಟಗೆರೆಯ ನಿವಾಸಿ ಸದಾಶಿವಯ್ಯ (55) ಎಂಬ ವ್ಯಕ್ತಿಗೆ ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಗದೆ ಮೃತಪಟ್ಟಿದ್ದಾರೆ. ಕಳೆದ ನಾಲ್ಕು‌ ದಿನಗಳಿಂದ ಗ್ಯಾಸ್ಟ್ರಿಕ್ ನಿಂದ ಬಳಲುತ್ತಿದ್ದ ಸದಾಶಿವಯ್ಯ, ಮುಷ್ಕರದಿಂದ ಚಿಕಿತ್ಸೆ ಸಿಗದೆ ಪರಿತಪಿಸಿದ್ದಾರೆ. ಇಂದು ತೀವ್ರ ಅಸ್ವಸ್ಥಗೊಂಡ ಅವರು ಮೃತಪಟ್ಟಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Doctors’ strike Tumkur ಓಪಿಡಿ ಕೊರಟಗೆರೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ