ಶಾಸಕನ ಅವಾಚ್ಯ ಪದಗಳ ಆಡಿಯೋ ವೈರಲ್

mt krishnappa audio viral

17-11-2017

ತುಮಕೂರು: ತುರುವೇಕೆರೆಯ ಜೆಡಿಎಸ್ ಶಾಸಕ ಎಂ.ಟಿ ಕೃಷ್ಣಪ್ಪ, ಸ್ವಪಕ್ಷದ ಮುಖಂಡನಿಗೆ ಅವಾಚ್ಯ ಶಬ್ದಗಳಿಂದ ಬೈದಿರುವುದು ಬೆಳಕಿಗೆ ಬಂದಿದೆ. ಜೆಡಿಎಸ್ ಮುಖಂಡರಾದ ನಾಗಲಾಪುರ ಮಂಜುನಾಥ್ ಗೆ  ಅವಾಚ್ಯ ಪದಗಳಿಂದ ನಿಂದಿಸಿ ಬೆದರಿಕೆ ಹಾಕಿದ್ದಾರೆ. ಉಚಿತ ಅಂಬ್ಯುಲೆನ್ಸ್ ಸೇವೆಯ ಬ್ಯಾನರ್ ಹಾಕದಂತೆ, ಎಂ.ಟಿ. ಕೃಷ್ಣಪ್ಪ ಬೆದರಿಕೆ ಹಾಕಿದ್ದು, ಶಾಸಕರ ದೌರ್ಜನ್ಯ ಪ್ರಶ್ನಿಸಿದ ಅದೇ ಪಕ್ಷದ ಮುಖಂಡ ನಾಗಲಾಪುರ ಮಂಜುನಾಥ್ ಗೆ ಶಾಸಕರು ಅಸಂವಿಧಾನಿಕ ಪದಗಳಿಂದ ನಿಂದಿಸಿದ್ದಾರೆ. ಇದು ನನ್ನ ಕ್ಷೇತ್ರ, ನಾನು ಹೇಳಿದ್ದೇ ನಡೀಬೇಕು ಎಂದು ಶಾಸಕ ಎಂ.ಟಿ ಕೃಷ್ಣಪ್ಪ ಅಧಿಕಾರದ ದರ್ಪ ತೋರಿದ್ದು, ಶಾಸಕರು ಆಡಿರುವ ಅವಾಚ್ಯ ಪದಗಳ ಆಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.


ಸಂಬಂಧಿತ ಟ್ಯಾಗ್ಗಳು

mt krishnappa Tumkur ಎಂ.ಟಿ ಕೃಷ್ಣಪ್ಪ ನಾಗಲಾಪುರ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ