ಬಸ್ಸಲ್ಲೇ ಪ್ರಾಣ ಬಿಟ್ಟ ವರದಿಗಾರ

Reporter died in bus

17-11-2017

ದಕ್ಷಿಣ ಕನ್ನಡ: ಬೆಂಗಳೂರಿನಿಂದ ಮಂಗಳೂರಿಗೆ ಕೆಎಸ್ಸಾರ್ಟಿಸಿಯ ವೋಲ್ವೋ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಪತ್ರಿಕಾ ವರದಿಗಾರ ಯದೀಶ್ ಡಿ. (60) ಎಂಬವರು ಹೃದಯಾಘಾತಕ್ಕೀಡಾಗಿ ಬಸ್ಸಿನಲ್ಲೇ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ. ಬೆಂಗಳೂರಿನ ‘ಕರ್ನಾಟಕ ರಾಜಕೀಯ’ ಎಂಬ ಪತ್ರಿಕೆಯ ವರದಿಗಾರನಾಗಿರುವ ಯದೀಶ್ ಡಿ. ಕಾರ್ಯ ನಿಮಿತ್ತ ಕೆಎಸ್ಸಾರ್ಟಿಸಿಯ ಐರಾವತ ಬಸ್ಸಿನಲ್ಲಿ ಒಬ್ಬಂಟಿಯಾಗಿ ಪ್ರಯಾಣಿಸುತ್ತಿದ್ದಾಗ ಈ ದುರ್ಘಟನೆ ನಡೆದಿದೆ.

ಬಸ್ಸಿನಲ್ಲಿದ್ದ ಪ್ರಯಾಣಿಕರೊಬ್ಬರನ್ನು ಉಪ್ಪಿನಂಗಡಿಯಲ್ಲಿ ಇಳಿಸಲು ಯತ್ನಿಸಿದ ವೇಳೆ ಕುಳಿತಲ್ಲಿಯೇ ಒಂದೇ ಭಂಗಿಯಲ್ಲಿ ನಿದ್ರಾ ಸ್ಥಿತಿಯಲ್ಲಿದ್ದ ಯದೀಶ್ ಡಿ. ಅವರ ಬಗ್ಗೆ ಸಂಶಯಗೊಂಡ ಬಸ್ ನಿರ್ವಾಹಕ, ಅವರನ್ನು ಪರಿಶೀಲಿಸಿ ಎಬ್ಬಿಸಲು ಮುಂದಾದಾಗ ಇವರು ಮತಪಟ್ಟಿರುವುದು ಗಮನಕ್ಕೆ ಬಂದಿದೆ. ಕೂಡಲೇ ಬಸ್ ಅನ್ನು ಉಪ್ಪಿನಂಗಡಿ ಠಾಣೆಗೆ ಕರೆತಂದು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಯಿತು. ತಕ್ಷಣವೇ ಪೊಲೀಸರು ಮೃತರ ಬಂಧುಗಳನ್ನು ಸಂಪರ್ಕಿಸಿ ವಿಷಯ ತಿಳಿಸಿದ್ದಾರೆ. ಇನ್ನು ಮತದೇಹವನ್ನು ಸ್ಥಳಿಯ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ ಎಂದು ತಿಳಿದು ಬಂದಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ