ಮನೆ ಮೇಲೆ ಚಿರತೆ ದಾಳಿ..!

Leopard attack on home ..!

17-11-2017

ಮಂಡ್ಯ: ಮನೆಯ ಮೇಲೆ ಚಿರತೆ ದಾಳಿ ಮಾಡಿ, ಸಾಕಿದ್ದ ನಾಯಿಯನ್ನು ಕಚ್ಚಿ ಘಾಸಿಗೊಳಿಸಿರುವ ಘಟನೆಯು ಮಂಡ್ಯದಲ್ಲಿ ನಡೆದಿದೆ. ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಲಕ್ಷ್ಮೀಪುರ ಗ್ರಾಮದಲ್ಲಿ, ನೆನ್ನೆ ತಡರಾತ್ರಿ ರಂಗಸ್ವಾಮಿ ಎಂಬುವರ ಮನೆ ಮೇಲೆ ಚಿರತೆ ದಾಳಿ ಮಾಡಿದ್ದು, ಮನೆಯಲ್ಲಿದ್ದ ನಾಯಿ ಚಿರತೆಯನ್ನು ಕಂಡು ಒಂದೇ ಸಮನೆ ಬೊಗಳುತ್ತಿತ್ತು. ಇನ್ನು ಮನೆಯವರು ದೊಣ್ಣೆ ಹಿಡಿದು ಬರುತ್ತಿದ್ದಂತೆ ನಾಯಿಯನ್ನು‌ ಕಚ್ಚಿ  ಚಿರತೆ ಪರಾರಿಯಾಗಿದೆ. ಮನೆಯ ಮೇಲೆ ದಾಳಿ ನಡೆಸಿದ ಸುದ್ದಿ ತಿಳಿದ ಗ್ರಾಮದ ಜನರು ಆತಂಕಕ್ಕೊಳಗಾಗಿದ್ದಾರೆ. ಚಿರತೆ ಸೆರೆ ಹಿಡಿಯುವಂತೆ, ಗ್ರಾಮಸ್ಥರು ಅರಣ್ಯ ಇಲಾಖೆಯನ್ನು ಆಗ್ರಹಿಸಿದ್ದಾರೆ. ಕಿಕ್ಕೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.


ಸಂಬಂಧಿತ ಟ್ಯಾಗ್ಗಳು

Leopard Mandya ಚಿರತೆ ದಾಳಿ ಕೆ.ಆರ್.ಪೇಟೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ