ಒಂದೇ ಕುಟುಂಬದ 3 ಮಕ್ಕಳ ದುರ್ಮರಣ

3 children died

17-11-2017

ಚಿತ್ರದುರ್ಗ: ಆಂಧ್ರಪ್ರದೇಶ ಗಡಿ ಭಾಗದ ಪಾತಪ್ಪನಗುಡಿ ಗ್ರಾಮದಲ್ಲಿ, ಮಂಡಕ್ಕಿ ತಿಂಡಿ ತಿಂದು ಮೂವರು ಮಕ್ಕಳು ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ. ವರ್ಷಿಣಿ(3), ಜಗದೀಶ್(6) ಮತ್ತು ಅಂಜಲಿ ಮೃತ‌ ಮಕ್ಕಳು. ಅಲ್ಲದೇ ಮೃತ ಮಕ್ಕಳ ತಂದೆ-ತಾಯಿಯಾದ ಬೋಜಪ್ಪ ಹಾಗೂ ಶ್ರೀದೇವಿಯು ಸಹ ತೀವ್ರ ಅಸ್ವಸ್ಥಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

ನಿನ್ನೆ ರಾತ್ರಿ ಮಂಡಕ್ಕಿ ತಿಂದ ಐದೂ ಜನ ಕುಟುಂಬಸ್ಥರು, ಸ್ವಲ್ಪ ಸಮಯದ ನಂತರ ಮಕ್ಕಳು ವಾಂತಿ ಮಾಡಿಕೊಂಡಿದ್ದಾರೆ. ಈ ವೇಳೆ ತಾಯಿ ಮಕ್ಕಳಿಗೆ ಮಾತ್ರಕೊಟ್ಟು ಮಲಗಿಸಿದ್ದಾರೆ. ಇನ್ನು ಬೆಳಿಗ್ಗೆ ಮಕ್ಕಳು ತೀವ್ರ ಅಸ್ವಸ್ಥಗೊಂಡಿದ್ದು, ಚಿತ್ರದುರ್ಗದ ಚಳ್ಳಕೆರೆಯ ಆಸ್ಪತ್ರೆಗೆ ಕರೆತರುವಷ್ಟರಲ್ಲಿ ಮೂವರು ಮಕ್ಕಳು ಮೃತಪಟ್ಟಿದ್ದಾರೆ. ಅವರು ತಿಂದ ಆಹಾರದಲ್ಲಿ ಹಲ್ಲಿ ಬಿದ್ದಿರುವ ಬಗ್ಗೆ ವೈದ್ಯರು ಶಂಕೆ ವ್ಯಕ್ತಪಡಿಸಿದ್ದಾರೆ. ಪರಶುರಾಂಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

 


ಸಂಬಂಧಿತ ಟ್ಯಾಗ್ಗಳು

Chitradurga children ಮಂಡಕ್ಕಿ ಚಳ್ಳಕೆರೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ