ಜೆಡಿಎಸ್ ಮುಖಂಡನಿಗೆ ಮಸಿ ಬಳಿದು ಮೆರವಣಿಗೆ

JD (S) leader parade at mosque

17-11-2017

ಬೆಳಗಾಗಿ: ಶ್ರೀರಾಮಸೇನೆಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಕುರಿತು, ಫೇಸ್ ಬುಕ್ ನಲ್ಲಿ ಅವಹೇಳನಕಾರಿಯಾಗಿ ಪೋಸ್ಟ್ ಮಾಡಿದ್ದ ಜೆಡಿಎಸ್ ಮುಖಂಡ ಬಸಗೌಡ ಪಾಟೀಲ ಅವರನ್ನು, ಶ್ರೀ ರಾಮ ಸೇನೆ ಕಾರ್ಯಕರ್ತರು ಮನಬಂದಂತೆ ಥಳಿಸಿ, ಮಸಿ ಬಳಿದು ಮೆರವಣಿಗೆ ಮಾಡಿದ್ದಾರೆ. ಬೆಳಗಾವಿಯ ಹುಕ್ಕೇರಿಯಲ್ಲಿ ನಿನ್ನೆ ರಾತ್ರಿ ಈ ಘಟನೆ ನೆಡದಿದೆ.

ಬ್ಲೂ ಬಾಯ್ಸ್ ಓಫ್ ಬಿಜೆಪಿ ಎಂಬ ಫೋಟೋದಲ್ಲಿ ಪ್ರಮೋದ ಮುತಾಲಿಕ್ ಫೋಟೋ ಹಾಕಿದ ಎಂಬ ಕಾರಣಕ್ಕೆ, ಜೆಡಿಎಸ್ ಮುಖಂಡ ಬಸಗೌಡ ಪಾಟೀಲ ಎಂಬುವರಿಗೆ ಥಳಿಸಿ, ಮಸಿ ಬಳಿದು, ಒಂದು ಕಿಲೋ ಮೀಟರ್ ವರೆಗೂ ಮೆರವಣಿಗೆ ಮಾಡಿದ್ದಾರೆ. ನಂತರ ಬಂದ್ ಪೊಲೀಸರು  ಬಸಗೌಡ ಪಾಟೀಲ್ ನನ್ನು ವಶಕ್ಕೆ ಪಡೆದರು. ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀರಾಮ ಸೇನೆಯ 10 ಕಾರ್ಯಕರ್ತರನ್ನು ಬಂಧಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಚಿಕ್ಕೋಡಿ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ