ಟೈಮ್ ಕೇಳುವ ನೆಪದಲ್ಲಿ ಅತ್ಯಾಚಾರ

Woman raped in Shimoga

17-11-2017

ಶಿವಮೊಗ್ಗ: ಮಹಿಳೆಯೊಬ್ಬರ ಮೇಲೆ ಯುವಕ ಅತ್ಯಾಚಾರ ಎಸಗಿರುವ ಘಟನೆಯು ಶಿವಮೊಗ್ಗದಲ್ಲಿ ನಡೆದಿದೆ. ಜಿಲ್ಲೆಯ ಸನ್ಯಾಸಿ ಕೊಡಮಗ್ಗೆಯ ನಾಗರಾಜ್ ಎಂಬಾತ ಈ ದುಷ್ಕೃತ್ಯ ಎಸಗಿದ್ದಾನೆ ಎಂದು ತಿಳಿದು ಬಂದಿದೆ. ಮಹಿಳೆ ಜಮೀನಿನಲ್ಲಿ ಆಕಳು ಮೇಯಿಸುವ ವೇಳೆ, ಸಮಯ ಕೇಳುವ ನೆಪದಲ್ಲಿ ಅತ್ಯಾಚಾರ ಎಸಗಿದ್ದಾನೆ. ಇನ್ನು ಘಟನೆಯಿಂದ ಮಹಿಳೆ ಅಸ್ವಸ್ಥಗೊಂಡಿದ್ದು, ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೇ ವೇಳೆ ನಾಗರಾಜ್ ನನ್ನು ಹಿಡಿದು ಥಳಿಸಿದರಾದರೂ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ. ಈ ಹಿಂದೆ ಕಳ್ಳತನ ಪ್ರಕರಣವೊಂದರಲ್ಲಿ ಆರೋಪಿ ನಾಗರಾಜ್ ಸಿಲುಕಿಕೊಂಡಿದ್ದ ಎನ್ನಲಾಗಿದೆ. ಅತ್ಯಾಚಾರ ಕುರಿತಂತೆ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಾಗಿ ಪೊಲೀಸರು ಶೋಧ ಕಾರ್ಯ ನಡೆಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Rape Shimoga ದುಷ್ಕೃತ್ಯ ಪ್ರಕರಣ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ