ವೈದ್ಯರೊಂದಿಗೆ ಮೇಯರ್ ತುರ್ತು ಸಭೆ

Mayor emergency meeting with doctors

16-11-2017

ಬೆಂಗಳೂರು: ಖಾಸಗಿ ವೈದ್ಯರ ಮುಷ್ಕರ ಹಿನ್ನೆಲೆ, ಬಿಬಿಎಂಪಿ ಮೇಯರ್ ಸಂಪತ್ ರಾಜ್ ಇಂದು ಬಿಬಿಎಂಪಿಯ ಅಸ್ಪತ್ರೆಗಳ ವೈದ್ಯರ ಜೊತೆ ತುರ್ತು ಸಭೆ ನಡೆಸಿದ್ದಾರೆ. ಸಭೆಯಲ್ಲಿ ಮಾತನಾಡಿದ ಮೇಯರ್, ಯಾವುದೇ ಕಾರಣಕ್ಕೂ ಅಸ್ಪತ್ರೆಯ ಸಿಬ್ಬಂದಿಗೆ ರಜೆ ನೀಡಬಾರದು, 24 ಗಂಟೆ ಅಸ್ಪತ್ರೆಯ ಡಾಕ್ಟರ್ ಕೆಲಸ ನಿರ್ವಹಿಸ ಬೇಕು ಮತ್ತು ವೈದ್ಯಕೀಯ ಸೇವೆ ನಿಲ್ಲಿಸಬಾರದು ಎಂದು ಸೂಚಿಸಿದ್ದಾರೆ. ಈ ವೇಳೆ ಅಸ್ಪತ್ರೆಗಳಿಗೆ ಪೊಲೀಸ್ ಭದ್ರತೆ ನೀಡಲಾಗುವುದು ಎಂದು ತಿಳಿಸಿದರು.

ಬಿಬಿಎಂಪಿ ಅಸ್ಪತ್ರೆಗಳು ಎಂದಿನಂತೆ ಕಾರ್ಯನಿರ್ವಹಿಸಲಿದ್ದು, ಎಲ್ಲ ಬಿಬಿಎಂಪಿ ಹೆರಿಗೆ ಅಸ್ಪತ್ರೆಗಳು 24 ಗಂಟೆ ತೆರೆಯಲು ಮೇಯರ್ ಸೂಚಿಸಿದರು. ಎಲ್ಲಾ ಅಗತ್ಯ ಸೇವೆಗೆ ಸಕಲ ಸಿದ್ಧತೆ ಮಾಡಲಾಗಿದ್ದು, ನಿವೃತ್ತ ವೈದ್ಯರು ಬಿಬಿಎಂಪಿ ಅಸ್ಪತ್ರೆಗಳಲ್ಲಿ ಕೆಲಸ ನಿರ್ವಹಿಸುವಂತೆ ಮನವಿ ಮಾಡಿದರು.


ಸಂಬಂಧಿತ ಟ್ಯಾಗ್ಗಳು

Sampath Raj Mayor ಬಿಬಿಎಂಪಿ ಅಸ್ವತ್ರೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ