ಜೇನುಹುಳ ಕಚ್ಚಿ 20 ಮಂದಿ ಅಸ್ವಸ್ಥ

25 people were bitten by honey bee

16-11-2017

ಮಂಡ್ಯ: ಯುವಕನೊರ್ವನ ಅಂತ್ಯ ಸಂಸ್ಕಾರದ ವೇಳೆ ಜೇನು ಹುಳಗಳು ಕಚ್ಚಿ 20 ಮಂದಿ ಅಸ್ವಸ್ಥರಾಗಿರುವ ಘಟನೆಯು, ಮಂಡ್ಯದ ಮದ್ದೂರಿನ ಬಿದರ ಹೊಸಳ್ಳಿ ಗ್ರಾಮದಲ್ಲಿ ನಡೆದಿದೆ. ಶವದ ಅಂತ್ಯ ಸಂಸ್ಕಾರಕ್ಕೂ ಮುನ್ನ ಕೆಲವು ನಿಮಿಷಗಳಿರುವಾಗ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಂಡಿದ್ದ ಜನರ ಮೇಲೆ ಜೇನು ಹುಳುಗಳು ದಾಳಿ ನಡೆಸಿವೆ, ಈ ವೇಳೆ ಶವವನ್ನು ಬಿಟ್ಟು ಗ್ರಾಮಸ್ಥರು ಚೆಲ್ಲಾಪಿಲ್ಲಿಯಾಗಿದ್ದಾರೆ. ಜೇನು ದಾಳಿಗೆ ಒಳಗಾದ ಗ್ರಾಮದ 20 ಮಂದಿಯನ್ನು, ಭಾರತೀ ನಗರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಯಿಂದ ಚಲ್ಲಾಪಿಲ್ಲಿಯಾಗಿದ್ದ ಗ್ರಾಮಸ್ಥರು ಸುಧಾರಿಸಿಕೊಂಡ ನಂತರ ಸುರಕ್ಷಿತ ಸಾಧನಗಳ ನೆರವಿನಿಂದ ಅಂತ್ಯ ಸಂಸ್ಕಾರ ನೆರವೇರಿಸಿದರು.


ಸಂಬಂಧಿತ ಟ್ಯಾಗ್ಗಳು

Mandya Bees attack ಜೇನು ದಾಳಿ ಮದ್ದೂರು


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ