‘ಶೀಘ್ರದಲ್ಲೇ ಜೆಡಿಎಸ್ ಮೊದಲ ಪಟ್ಟಿ’-ಸಿಂಧ್ಯಾ

JDS first list soon

16-11-2017

ಹುಬ್ಬಳ್ಳಿ: ಮಹದಾಯಿ ವಿವಾದಕ್ಕೆ ಪ್ರಧಾನಿ ಮೋದಿ ಇತಿಶ್ರಿ ಹಾಡಬೇಕು ಎಂದು, ಜೆಡಿಎಸ್ ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷರಾದ ಪಿ.ಜಿ.ಆರ್.ಸಿಂಧ್ಯಾ ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ ನಡೆದ ಜೆಡಿಎಸ್ ಕಾರ್ಯಕಾರಿಣಿ ಸಭೆ ಬಳಿಕ, ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿಗಳು ಮಧ್ಯಸ್ಥಿಕೆ ವಹಿಸಿ ಟ್ರಿಬ್ಯುನಲ್ ಹೊರಗೆ ಮಹದಾಯಿ ಸಮಸ್ಯೆಯನ್ನು ಇತ್ಯರ್ಥ ಪಡಿಸಬೇಕು ಎಂದರು.

ಈಗಾಗ್ಲೆ ನಮ್ಮ ರೈತಾಪಿ ವರ್ಗ ತೊಂದರೆಯಲ್ಲಿದೆ, ಕೇಂದ್ರ ಮತ್ತು ರಾಜ್ಯ ಸರ್ಕಾರ ರೈತರ ನೆರವಿಗೆ ಬರಬೇಕು ಎಂದು ಆಗ್ರಹಿಸಿದರು. ಡಿಸೆಂಬರ್ ನಿಂದ ಚುನಾವಣೆ ತಯಾರಿ ಚುರುಕಿಗೊಳ್ಳುತ್ತೆ. ದೇವೇಗೌಡರ, ಕುಮಾರಸ್ವಾಮಿಯವರ ಮತ್ತು ರಾಮಕೃಷ್ಣ ಹೆಗಡೆಯವರ ಸಾಧನೆಯನ್ನು ಮನೆ ಮನೆಗೆ ತಲುಪಿಸುತ್ತೇವೆ ಎಂದರು. ಇನ್ನು ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ವಿಚಾರದ ಕುರಿತು, ಎಲ್ಲವೂ ದೇವೇಗೌಡರಿಗೇ ಬಿಟ್ಟದ್ದು. 224 ಸೀಟುಗಳನ್ನು ಗೆಲ್ಲುವ ನಿಟ್ಟಿನಲ್ಲಿ ಅನುಭವಿಗಳನ್ನು ಆಯ್ಕೆ ಮಾಡಲಾಗುತ್ತೆ, ಶೀಘ್ರದಲ್ಲೇ 126 ಅಭ್ಯರ್ಥಿಗಳ ಮೊದಲನೇ ಪಟ್ಟಿ ಬಿಡುಗಡೆ ಮಾಡುವುದಾಗಿ ತಿಳಿಸಿದರು.


ಸಂಬಂಧಿತ ಟ್ಯಾಗ್ಗಳು

P.G.R Sindhia JDS ಮಹದಾಯಿ ಹುಬ್ಬಳ್ಳಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ