ಕೋಪಕ್ಕೆ ಗುಂಡು ಹಾರಿಸಿದ ವ್ಯಕ್ತಿ !

A man shot in anger

16-11-2017

ಬೆಂಗಳೂರು: ಅಮೃತಹಳ್ಳಿಯ ಹೊರವಲಯದಲ್ಲಿ ನಿನ್ನೆ ರಾತ್ರಿ ಕುಡಿತ ಬಿಡಿಸುವ ವ್ಯಸನಮುಕ್ತ ಶಿಬಿರಕ್ಕೆ ಸೇರುವಂತೆ ಪುತ್ರ ಒತ್ತಡ ತಂದಿದ್ದರಿಂದ ಆಕ್ರೋಶಗೊಂಡ ತಂದೆ, ಎರಡು ಸುತ್ತು ಗುಂಡುಹಾರಿಸಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಕುಡಿತದ ಚಟ ಅಂಟಿಸಿಕೊಂಡಿದ್ದ ಕೃಷಿಕ ಮುನಿಕಾಳಪ್ಪ ಅವರು, ಮನೆಯಲ್ಲಿ ರಾದ್ಧಾಂತ ಮಾಡುತ್ತಿದ್ದರು. ತಂದೆ ವರ್ತನೆಯಿಂದ ಬೇಸತ್ತ ಪುತ್ರ ಕುಡಿತ ಬಿಡಿಸಲು ವ್ಯಸನಮುಕ್ತ ಕೇಂದ್ರಕ್ಕೆ ತಂದೆಯನ್ನು ಸೇರಿಸಲು ಮುಂದಾಗಿದ್ದರು. ರಾತ್ರಿ ಕುಡಿದು ಬಂದು ರಂಪಾಟ ಮಾಡುತ್ತಿದ್ದ ಮುನಿಕಾಳಪ್ಪ ಅವರನ್ನು ಪುತ್ರ, ನಿನ್ನನ್ನು ವ್ಯಸನಮುಕ್ತ ಕೇಂದ್ರಕ್ಕೆ ನಾಳೆ ಸೇರಿಸುವುದಾಗಿ ಹೇಳಿದ್ದು, ಇದರಿಂದ ಆಕ್ರೋಶಗೊಂಡ ಮುನಿಕಾಳಪ್ಪ, ಮನೆಯಲ್ಲಿದ್ದ ಡಬಲ್ ಬ್ಯಾರಲ್ ಗನ್‍ನಿಂದ ಗೋಡೆ ಹಾಗೂ ಕಾಂಪೌಂಡ್ ಗೇಟ್‍ಗೆ ಗುಂಡು ಹಾರಿಸಿದ್ದಾರೆ. ಸುದ್ದಿ ತಿಳಿದ ಅಮೃತಹಳ್ಳಿ ಪೊಲೀಸರು ಮುನಿಕಾಳಪ್ಪ ಅವರನ್ನು ವಿಚಾರಣೆಗೊಳಪಡಿಸಿ ಡಬಲ್ ಬ್ಯಾರಲ್ ಗನ್‍ ಅನ್ನು ವಶಕ್ಕೆ ತೆಗೆದುಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Double Barrel Gun ಡಬಲ್ ಬ್ಯಾರಲ್ ಗುಂಡು


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ