ಹಾಡಹಗಲು ಎಲ್ಲರೆದುರಲ್ಲೇ ದರೋಡೆ

Robbery with knife

16-11-2017

ಬೆಂಗಳೂರು: ಹಾಡಹಗಲೇ ಸೇಲ್ಸ್ ಮ್ಯಾನ್ ಒಬ್ಬರಿಗೆ ಡ್ರ್ಯಾಗರ್ ತೋರಿಸಿ ಹೆದರಿಸಿ ಸುಲಿಗೆ  ಮಾಡಿರುವ ದುರ್ಘಟನೆ ಹೆಬ್ಬಾಳದ ಕಾಫಿ ಬೋರ್ಡ್ ಲೇಔಟ್ ನಲ್ಲಿ ನಡೆದಿದೆ. ಕಾಫಿ ಬೋರ್ಡ್ ಲೇಔಟ್ ನ ಅಂಗಡಿಯೊಂದರ ಮುಂದೆ ಸೇಲ್ಸ್ ಮ್ಯಾನ್ ನಿಂತಿದ್ದರು. ಆ ಸ್ಥಳಕ್ಕೆ ಹೆಲ್ಮೆಟ್ ಹಾಕಿಕೊಂಡು ಬೈಕ್ ನಲ್ಲಿ ಬಂದಿದ್ದ ಇಬ್ಬರು ದುಷ್ಕರ್ಮಿಗಳು ಡ್ರ್ಯಾಗರ್ ನಿಂದ ಚುಚ್ಚುವುದಾಗಿ ಹೆದರಿಸಿ ಅವರ ಕೈಯಲ್ಲಿದ್ದ 40 ಸಾವಿರ ರೂ. ಹಣದ ಬ್ಯಾಗ್ ಹಾಗೂ ಮೊಬೈಲ್ ದೋಚಿದ್ದಾರೆ.

ಈ ವೇಳೆ ಸ್ಥಳದಲ್ಲಿದ್ದ ಜನರು ಅಸಹಾಯಕ ಸ್ಥಿತಿಯಲ್ಲಿ ನಿಂತು ನೋಡುತ್ತಿದ್ದರು. ಒಬ್ಬನ ಕೈಯಲ್ಲಿ ಡ್ರ್ಯಾಗರ್ ಇದ್ದು ಇನ್ನೊಬ್ಬ ಹಾಗೇ ಬರಿಗೈಯಲ್ಲಿ ಇದ್ದನು. ಅಲ್ಲಿಯೇ ನಿಂತಿದ್ದ ಒಬ್ಬ ಇವರನ್ನು ಹಿಡಿಯಲು ಮುಂದಾದಾಗ ಅವರಿಗೆ ಚುಚ್ಚಲು ಮುಂದಾದಂತೆ ಮಾಡಿ ಹೆದರಿಸಿ ಅಲ್ಲಿಂದ ಪರಾರಿಯಾಗಿದ್ದಾರೆ. ಹೆಲ್ಮೆಟ್ ಧರಿಸಿದ್ದ ಇಬ್ಬರು ದುಷ್ಕರ್ಮಿಗಳ ಈ ಕೃತ್ಯವು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅಮೃತಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿ, ಕಳ್ಳರಿಗಾಗಿ ಬಲೆ ಬೀಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Robbery Helmet ಕಾಫಿ ಬೋರ್ಡ್ ಡ್ರ್ಯಾಗರ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ