ಕಳ್ಳನೊಂದಿಗೆ 850 ಗ್ರಾಂ.ಚಿನ್ನ ವಶ !

850 gram gold Capture

16-11-2017

ಬೆಂಗಳೂರು: ನಗರದ ವಿವಿಧೆಡೆ ರಾಡ್ ನಿಂದ ಬಾಗಿಲು ಮುರಿದು ಮನೆಗಳ್ಳತನ ಮಾಡುತ್ತಾ ಐಷಾರಾಮಿ ಜೀವನ ನಡೆಸುತ್ತಿದ್ದ ಕುಖ್ಯಾತ ಕನ್ನಗಳ್ಳನನ್ನು ಬಂಧಿಸಿರುವ ಪೂರ್ವ ವಿಭಾಗದ ಪೊಲೀಸರು 30 ಲಕ್ಷ ಮೌಲ್ಯದ ಚಿನ್ನಾಭರಣ ಇನ್ನಿತರ ವಸ್ತುಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಉತ್ತರಹಳ್ಳಿಯ ಮಂಜುನಾಥ ಅಲಿಯಾಸ್ ಕಲ್ಕೆರೆಮಂಜ (32) ಬಂಧಿತ ಆರೋಪಿ. ಬಂಧಿತನಿಂದ 30 ಲಕ್ಷ ಮೌಲ್ಯದ 850 ಗ್ರಾಂ ತೂಕದ ಚಿನ್ನಾಭರಣಗಳು, ವಿಡಿಯೋಕಾನ್ ಟಿವಿ, ಮಾರುತಿ ಸ್ವಿಫ್ಟ್ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ತಮಿಳುನಾಡು ಮೂಲದ ಆರೋಪಿಯು ಸೈಕಲ್ ಕಳ್ಳತನದಿಂದ ಅಪರಾಧ ಕೃತ್ಯಗಳಿಗಿಳಿದಿದ್ದು, ಇಲ್ಲಿಯವರೆಗೆ 40ಕ್ಕೂ ಹೆಚ್ಚು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ. ಅದರಲ್ಲಿ 20ರಲ್ಲಿ ಖುಲಾಸೆಯಾಗಿದ್ದರೆ, ಇನ್ನು 24 ಪ್ರಕರಣಗಳನ್ನು ಎದುರಿಸುತ್ತಿದ್ದಾನೆ.

ಆರೋಪಿಯು ಭಾರತಿನಗರ, ಪುಲಿಕೇಶಿನಗರ, ಸೋಲದೇವನಹಳ್ಳಿ, ಸೂರ್ಯನಗರ ಹಾಗೂ ಹಾಸನ ನಗರ ಬಡಾವಣೆಗಳಲ್ಲಿ ಕಳ್ಳತನ ಮಾಡಿದ್ದ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ. ಕಬ್ಬಿಣದ ರಾಡ್‍ಗಳಿಂದ ಮನೆ ಬಾಗಿಲುಗಳನ್ನು ಶಬ್ಧವಾಗದಂತೆ ಮುರಿಯುವಲ್ಲಿ ನಿಪುಣನಾಗಿದ್ದ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.

ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿ 2 ವರ್ಷಗಳ ಕಾಲ ಜೈಲುಶಿಕ್ಷೆ ಅನುಭವಿಸಿದ್ದರೂ, ಮತ್ತೆ ಕೃತ್ಯಕ್ಕಿಳಿದಿದ್ದ ಆರೋಪಿಯು ಜೀವನ ನಿರ್ವಹಣೆಗೆ ಯಾವುದೇ ಉದ್ಯೋಗ ಮಾಡದೆ ಕಳವು ಮಾಡಿದ ಮಾಲುಗಳನ್ನು ಮಾರಾಟ ಮಾಡಿ ಕಾರಿನಲ್ಲಿ ಓಡಾಡುತ್ತ ಐಷಾರಾಮಿ ಜೀವನ ನಡೆಸುತ್ತಿರುವುದು ತನಿಖೆಯಲ್ಲಿ ಕಂಡು ಬಂದಿದೆ. ಆರೋಪಿಯನ್ನು ಭಾರತಿನಗರ ಪೊಲೀಸರು ಖಚಿತ ಮಾಹಿತಿಯಾಧರಿಸಿ ಬಂಧಿಸಿ ತನಿಖೆ ಕೈಗೊಂಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Gold Thief ಐಷಾರಾಮಿ ಆರೋಪಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ