ಕಿರುಕುಳ ತಾಳಲಾರದೆ ಯುವಕ ಆತ್ಮಹತ್ಯೆ !

Young man commits suicide

16-11-2017

ಚಿತ್ರದುರ್ಗ: ಕಾಮಗಾರಿ ಅರ್ಧಕ್ಕೆ ಕೈಬಿಟ್ಟಿದ್ದ ಹಿನ್ನೆಲೆ, ಕಾಮಗಾರಿಗೆ ಹಣ ನೀಡಿದ್ದವರು ನೀಡುತ್ತಿದ್ದ ಕಿರುಕುಳ ತಾಳಲಾರದೆ ಡೆತ್ ನೋಟ್ ಬರೆದಿಟ್ಟು ಯುವಕನೊಬ್ಬ ಆತ್ಮಹತ್ಯೆಗೆ ಶರಣಾಗಿದ್ದಾನೆ. ಘಟನೆಯು ಚಿತ್ರದುರ್ಗದ ಕೆಳಗೋಟೆ ಬಡಾವಣೆಯಲ್ಲಿ ನಡೆದಿದೆ. ವಿನಯ್(26) ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಯುವಕ.

ಆರ್ಕಿಟೆಕ್ಟ್ ಹಾಗೂ ಬಿಲ್ಡಿಂಗ್ ಕಂಟ್ರಾಕ್ಟರ್ ಆಗಿ ಕೆಲಸ ಮಾಡುತ್ತಿದ್ದ ವಿನಯ್, ಹಿರಿಯೂರು ನ್ಯಾಯಾಲಯದ ಶಿರಸ್ತೇದಾರ್ ಮಂಜುಳಾ ಪಟವರ್ಧನ್ ಅವರಿಂದ ಮನೆ ನಿರ್ಮಾಣ ಗುತ್ತಿಗೆ ಪಡೆದಿದ್ದರು. ಸಂಪೂರ್ಣ ಗುತ್ತಿಗೆ ಹಣ ಪಡೆದು ಅರ್ಧಂಬರ್ಧ ಕಾಮಗಾರಿಗೆ ಕೈಬಿಟ್ಟಿದ್ದ ಹಿನ್ನೆಲೆ, ಮಂಜುಳಾ ಪಟವರ್ಧನ್ ಹಾಗೂ ಅವರ ಮಕ್ಕಳು ಧಮ್ಕಿಹಾಕಿ ಒತ್ತಡ ಹೇರುತ್ತಿದ್ದರು ಎನ್ನಲಾಗಿದೆ.

ಮಂಜುಳಾ ಪಟವರ್ಧನ್, ಮಕ್ಕಳಾದ ಅಭಿಷೇಕ್ ಪಟವರ್ಧನ್, ಅಭಿಜಿತ್ ಪಟವರ್ಧನ್ ಹಾಗೂ ಮಗಳು ಅಭಿನೇತ್ರಿ ಪಟವರ್ಧನ್ ಹೆಸರು ಉಲ್ಲೇಖಿಸಿ ಡೆತ್ ನೋಟ್ ಬರೆದು, ವಿನಯ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ದುರ್ಗದ ಕೆಳಗೋಟೆ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಸಂಬಂಧಿತ ಟ್ಯಾಗ್ಗಳು

Death Note Chitradurga ಕಿರುಕುಳ ಆತ್ಮಹತ್ಯೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ