ಮತ್ತೆ ಬಳ್ಳಾರಿಗೆ ಜನಾರ್ಧನ್ ರೆಡ್ಡಿ..!

Janardhan Reddy back to Bellary

16-11-2017

ಬಳ್ಳಾರಿ: ಮಾಜಿ ಸಚಿವ ಗಾಲಿ ಜನಾರ್ಧನ್ ರೆಡ್ಡಿ, ಮತ್ತೆ ಬಳ್ಳಾರಿಗೆ ಬರಲು ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ. ಸಾಕ್ಷಿ ನಾಶ ಇಲ್ಲವೆ ಬೆದರಿಕೆ ಹಾಕಬಹುದು ಎಂಬ ನಿಟ್ಟಿನಲ್ಲಿ, ಜನಾರ್ಧನ ರೆಡ್ಡಿಗೆ ಬಳ್ಳಾರಿ ಜಿಲ್ಲೆಯಲ್ಲಿ ಇರಲು ನಿರಾಕರಿಸಿತ್ತು. ಈ‌ ಹಿನ್ನಲೆಯಲ್ಲಿ ಆಗಾಗ ಹಲವು‌ ಕಾರಣಗಳ‌ ಮೇಲೆ ಬಳ್ಳಾರಿಗೆ ಬರಲು ರೆಡ್ಡಿ, ಸುಪ್ರೀಂ ಕೋರ್ಟ್ ಅನುಮತಿ ಪಡೆದುಕೊಂಡು ಬರುತ್ತಿದ್ದಾರೆ. ಇತ್ತೀಚೆಗೆ ದಸರಾ ಹಬ್ಬದ ಸಂದರ್ಭದಲ್ಲಿ ಬಳ್ಳಾರಿಗೆ ಬಂದಿದ್ದ ಅವರು, ಈಗ ನವೆಂಬರ್ 23 ರಿಂದ  26 ವರೆಗೆ ಬಳ್ಳಾರಿಯಲ್ಲಿ ಇರಲು ಅನುಮತಿ ಪಡೆದಿದ್ದಾರೆ. ತಮ್ಮ ಸಂಬಂಧಿಕರ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಲು ರೆಡ್ಡಿ  ಈ ಅನುಮತಿ ಪಡೆದಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


Namma bellary
  • H pampapathi
  • Ficcl field officer
Good olle suddi
  • Shrishail
  • Teachers
Hi
  • Rajbaksha
  • Former