‘ವೈದ್ಯರ ಮೇಲೆ ಪ್ರಹಾರ ನಿಲ್ಲಿಸಬೇಕು’

Stop controlling private doctors

16-11-2017

ಉತ್ತರ ಕನ್ನಡ: ನಾವು ಅಧಿಕಾರಕ್ಕೆ ಬಂದ ತಕ್ಷಣ ವಿವಾದಿತ ಕೆಪಿಎಂಇ(ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ನಿಯಂತ್ರಣ ತಿದ್ದುಪಡಿ ಕಾಯ್ದೆಯನ್ನು) ಹಿಂಪಡೆಯುತ್ತೇವೆ ಎಂದು, ಶಿರಸಿಯ ಮುಂಡಗೋಡು ಪಟ್ಟಣದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡು ಪಟ್ಟಣಕ್ಕೆ ಬಿಜೆಪಿ ಪರಿವರ್ತನಾ ಯಾತ್ರೆಗೆ ಆಗಮಿಸಿದ ವೇಳೆಯಲ್ಲಿ ಈ ಹೇಳಿಕೆ ನೀಡಿದ್ದಾರೆ.

ವೈದ್ಯರ ಮುಷ್ಕರದಿಂದ ಸಾಕಷ್ಟು ಸಾವುಗಳಾಗಿವೆ. ರಾಜ್ಯ ಸರ್ಕಾರ ಒಣ ಪ್ರತಿಷ್ಠೆಯನ್ನ ಬಿಡಬೇಕಾಗಿದೆ, ವೈದ್ಯರ ಮೇಲೆ ಪ್ರಹಾರ ಮಾಡುವುದನ್ನು ನಿಲ್ಲಿಸಬೇಕಾಗಿದೆ ಎಂದು ಹೇಳಿದರು. ಕೆಪಿಎಂಇ ಕಾಯ್ದೆ ತಿದ್ದಪಡಿ ಸಂಬಂಧ ಸಿಎಂ‌ ಹಾಗೂ ಆರೋಗ್ಯ ಸಚಿವರ ನಡುವೆ ಗೊಂದಲವಿದೆ ಎಂದ ಅವರು, ವೈದ್ಯರ ಮುಷ್ಕರದಿಂದ ಗೊಂದಲ ಉಂಟಾಗಿದ್ದು ಇದನ್ನು ಪರಿಹರಿಸುವ ಕಾರ್ಯ ಮಾಡಬೇಕಾಗಿದೆ ಎಂದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ