‘ಪ್ರತಿಭಟನೆ ಅಗತ್ಯ ಇಲ್ಲ’-ಸಿಎಂ16-11-2017

ಬೆಂಗಳೂರು: ಖಾಸಗೀ ವೈದ್ಯಕೀಯ ತಿದ್ದುಪಡಿ ವಿಧೇಯಕ ವಿಚಾರಕ್ಕೆ ಸಂಬಂಧಿಸಿಂತೆ, ಸಿಎಂ ಸಿದ್ದರಾಮಯ್ಯ ಬೆಂಗಳೂರಿನಲ್ಲಿ ಮಾತನಾಡಿದ್ದು, ವಿಧೇಯಕ ಮಂಡನೆಗೂ ಮುನ್ನ ವೈದ್ಯರೊಂದಿಗೆ ಚರ್ಚೆ ಮಾಡಲಾಗುತ್ತದೆ ಎಂದು, ವೈದ್ಯರಿಗೆ ಈಗಾಗ್ಲೇ ತಿಳಿಸಲಾಗಿದೆ, ಸದ್ಯ ವೈದ್ಯರು ಪ್ರತಿಭಟನೆ ಮಾಡೊ ಅಗತ್ಯ ಇಲ್ಲ ಎಂದರು. ಸಮಿತಿಯ ವರದಿಯನ್ನು ಮತ್ತೆ ಸದನದಲ್ಲಿ ಮಂಡಿಸಿದ್ದಿವಾ? ಇಲ್ಲವಲ್ಲಾ ಹೀಗಿರುವಾಗ ಪ್ರತಿಭಟನೆ ಅಗತ್ಯವೇನು ಎಂದು ಪ್ರಶ್ನಿಸಿದರು.

ಇನ್ನು ಈ ಕುರಿತಂತೆ ಮಾತನಾಡಿದ ಬೃಹತ್ ಕೈಗಾರಿಕಾ ಸಚಿವ ಆರ್.ವಿ ದೇಶಪಾಂಡೆ, ವೈದ್ಯರಿಗೆ ಮನವಿ ಮಾಡುವೆ, ಪ್ರತಿಭಟನೆ ಹಿಂದಕ್ಕೆ ಪಡೆಯಿರಿ, ಸಿಎಂ ನಿಮ್ಮೊಂದಿಗೆ ಮಾತನಾಡಿದ್ದಾರೆ, ಹೀಗಿರುವಾಗ ಧರಣಿ ಅಗತ್ಯವೆನು? ಎಂದು ಪ್ರಶ್ನಿಸಿದ್ದಾರೆ. ಇದಲ್ಲದೇ ಬಿಜೆಪಿ ಅಧಿಕಾರಕ್ಕೆ ಬಂದರೆ 24 ಗಂಟೆಯಲ್ಲಿ ವೈದ್ಯಕೀಯ ಬಿಲ್ ರದ್ದು ಮಾಡುವ ಭರವಸೆ ವಿಚಾರದ ಕುರಿತು, ಬಿಜೆಪಿ ಅಧಿಕಾರಕ್ಕೆ ಬರಲ್ಲ, ರದ್ದು ಮಾಡಲ್ಲ, ಮುದುಕಿಗೆ ಮೀಸೆ ಬರುತ್ತಾ ಇಲ್ಲ? ಹಾಗೆಯೇ ಬಿಜೆಪಿ ಅಧಿಕಾರಕ್ಕೆ ಬರಲ್ಲ ಎಂದು ವ್ಯಂಗ್ಯವಾಡಿದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ