ರೈತನನ್ನು ಬಲಿ ಪಡೆದ ಮುಷ್ಕರ

Doctors strike farmer died

16-11-2017

ಬಳ್ಳಾರಿ: ಹೃದಯಾಘಾತಕ್ಕೆ ಒಳಗಾಗಿದ್ದ ರೈತನಿಗೆ ಚಿಕಿತ್ಸೆ ಸಿಗದೇ ಸಾವನ್ನಪ್ಪಿರುವ ದಾರುಣ ಘಟನೆಯು, ಬಳ್ಳಾರಿಯಲ್ಲಿ ನಡೆದಿದೆ. ಸುಣಗಾರ ನಾಗರಾಜ್ (48) ಮೃತ ರೈತ. ಈತ ಹೊಸಪೇಟೆ ತಾಲ್ಲೂಕಿನ ಗೊಲ್ಲರಹಳ್ಳಿಯಲ್ಲಿ ನಿವಾಸವಿದ್ದು, ಇಂದು ಮುಂಜಾನೆ ಜಮೀನಿನಲ್ಲಿ ನೀರು ಹಾಯಿಸುವಾಗ ಹೃದಯಾಘಾತಕ್ಕೆ ಒಳಗಾಗಿದ್ದಾರೆ. ತಕ್ಷಣವೇ ಇವರನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರು, ವೈದ್ಯರು ಚಿಕಿತ್ಸೆ ನೀಡಲಿಲ್ಲ. ಅಲ್ಲಿಂದ ರೈತನನ್ನು ಹೊಸಪೇಟೆಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸುವಷ್ಟರಲ್ಲೇ ರೈತ ಸಾವನ್ನಪ್ಪಿದ್ದಾರೆ. ಕುಟುಂಬಕ್ಕೆ ಆಧಾರವಾಗಿದ್ದ ರೈತನನ್ನು ಕಳೆದುಕೊಂಡ ಕುಟುಂಬ ಬೀದಿಗೆ ಬಿದ್ದಿದೆ. ಅಲ್ಲದೆ ಸಾವಿಗೆ ವೈದ್ಯರ ಮುಷ್ಕರವೇ ಕಾರಣ ಎಂದು ಕುಡುಂಬಸ್ಥರು ಆರೋಪಿಸುತ್ತಿದ್ದಾರೆ.

ಇನ್ನೊಂದೆಡೆ ಬೆಳಗಾವಿಯಲ್ಲಿ ವೈದ್ಯರ ಮುಷ್ಕರದಿಂದ ಜಿಲ್ಲೆಯ ರಾಯಬಾಗ ತಾಲ್ಲೂಕಿನ ಪಾಲಭಾವಿ ಗ್ರಾಮದ ನಿವಾಸಿ, ಬಸಪ್ಪ ಬಾಳಪ್ಪ ಮುರಾಬಟ್ಟಿ(63) ಅವರಿಗೆ ನಿನ್ನೆ ರಾತ್ರಿ 11 ಗಂಟೆಗೆ ಲಘು ಹೃದಯ ಆಘಾತವಾಗಿದೆ. ಅವರನ್ನು ಸ್ಥಳೀಯ ಮಹಾಲಿಂಗಪೂರ ಖಾಸಗಿ ಆಸ್ಪತ್ರೆಗೆ ಕರೆತಂದಿದ್ದಾರೆ, ಇಲ್ಲಿ ಆಸ್ಪತ್ರೆ ಬಂದ್ ಮಾಡಲಾಗಿದ್ದು, ಬಾಗಲಕೋಟೆ ಆಸ್ಪತ್ರೆಗೆ ವೈದರೇ ಇಲ್ಲದ್ದರಿಂದ, ತುರ್ತು ಚಿಕಿತ್ಸೆಗಾಗಿ ಬೆಳಗಾವಿಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ಒಟ್ಟಾರೆ ವೈದ್ಯರ ಮುಷ್ಕರದಿಂದ ಹಲವಾರು ಬಡ ಜೀವಿಗಳು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Farmer Heart attack ಬಳ್ಳಾರಿ ಹೊಸಪೇಟೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ