ನಿಷೇಧಿತ ನೋಟು ಬದಲಾವಣೆಗೆ ಯತ್ನ !

Banned 1000 notes seized

16-11-2017 238

ಗದಗ: ನಿಷೇಧಿತ 1000 ಮುಖಬೆಲೆಯ ನೋಟುಗಳನ್ನು ಬದಲಾಯಿಸಲು ಯತ್ನಿಸುತ್ತಿದ್ದ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆಯು ಗದಗ ನಗರದ ರೈಲ್ವೆ ಕ್ವಾಟರ್ಸ್ ಬಳಿ ನಡೆದಿದೆ. ಬಂಧಿತರಿಂದ 12 ಲಕ್ಷ ರೂ. ಹಣವನ್ನು ವಶಕ್ಕೆ ಪಡೆದಿದ್ದಾರೆ. ಖಚಿತ ಮಾಹಿತಿ ಮೇರೆಗೆ, ಸಿಪಿಐ ವೆಂಕಟೇಶ್ ಯಡಹಳ್ಳಿ ನೇತೃತ್ವದಲ್ಲಿ  ಪೊಲೀಸರು ದಾಳಿ ನಡೆಸಿ, ಗದಗ ನಗರದ ಎಳನೀರು ವ್ಯಾಪಾರಿಗಳಾದ ಮಾಬುಸುಬಾನಿ, ಸುರೇಶ, ನಾಗಾವಿ ಗ್ರಾಮದ ಮುತ್ತಪ್ಪ ಮತ್ತು ಚಾಲಕ ಸುರೇಶ್ ನನ್ನು ಬಂಧಿಸಿದ್ದು, ಹೆಚ್ಚಿನ ತನಿಖೆಗೆ ಒಳಪಡಿಸಿದ್ದಾರೆ. ರೈಲ್ವೆ ಕ್ವಾಟರ್ಸ್ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಸಂಬಂಧಿತ ಟ್ಯಾಗ್ಗಳು

Note-Ban Gadag ನಿಷೇಧಿತ ರೈಲ್ವೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ