ಮಡಿಕೇರಿಯಲ್ಲಿ ಸಿಬಿಐ ತಂಡ...!

Kannada News

15-11-2017

ಬೆಂಗಳೂರು: ಡಿವೈಎಸ್‍ಪಿ ಗಣಪತಿ ನಿಗೂಢ ಆತ್ಮಹತ್ಯೆ ಪ್ರಕರಣದ ತನಿಖೆ ಕೈಗೆತ್ತಿಕೊಂಡಿರುವ ಸಿಬಿಐ ಅಧಿಕಾರಿಗಳು ಗಣಪತಿಯ ಸಹೋದರಿ ಸಬಿತಾ ಅವರ ವಿಚಾರಣೆ ನಡೆಸಿದ್ದಾರೆ. ಮೂರು ತಿಂಗಳೊಳಗೆ ಪ್ರಕರಣದ ಸಂಪೂರ್ಣ ವರದಿವನ್ನು ನೀಡುವಂತೆ ಸಿಬಿಐಗೆ ಸುಪ್ರೀಂ ಕೋರ್ಟ್ ಆದೇಶಿಸಿರುವ ಹಿನ್ನೆಲೆಯಲ್ಲಿ ಸಿಬಿಐನ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕಲೈಮಣಿ ನೇತೃತ್ವದಲ್ಲಿ ಅಧಿಕಾರಿಗಳು ಗಣಪತಿಯ ಸಹೋದರಿ ಸಬಿತಾ ಅವರನ್ನು ವಿಚಾರಣೆ ನಡೆಸಿ ಮಾಹಿತಿ ಕಲೆ ಹಾಕಿದ್ದಾರೆ.

ಇಂಚಿಂಚೂ ಮಾಹಿತಿಯನ್ನ ಕಲೆ ಹಾಕುತ್ತಿರುವ ಸಿಬಿಐ ಅಧಿಕಾರಿಗಳು, ಗಣಪತಿ ಅವರು ಈ ಹಿಂದೆ ಕೆಲಸ ಮಾಡುವಾಗ ವಾತಾವರಣ ಹೇಗಿತ್ತು ಗಣಪತಿ ಆತ್ಮಹತ್ಯೆಗೆ ಮುನ್ನ ಏನಾದರೂ ಹೇಳಿದ್ದರಾ? ಎನ್ನುವ ಬಗ್ಗೆ ಗಣಪತಿ ಸಹೋದರಿಯಿಂದ ಮಾಹಿತಿ ಪಡೆದುಕೊಂಡಿದ್ದಾರೆ. ಹಾಗೆ ಇಲಾಖೆಯಲ್ಲಿ ಹಿರಿಯ ಅಧಿಕಾರಿಗಳು ಕಿರುಕುಳ ನೀಡಿರುವ ಬಗ್ಗೆ ಸಹೋದರಿ ಸಬಿತಾ ಜೊತೆ ಗಣಪತಿ ಮಾತನಾಡಿದ್ದರಾ ಎನ್ನುವ ಮಾಹಿತಿ ಪಡೆಯಲಿದ್ದಾರೆ.

ಸಿಬಿಐ ತನಿಖೆ ಕೋರಿ ಗಣಪತಿ ತಂದೆ ಸುಪ್ರೀಂ ಕೋರ್ಟ್‍ಗೆ ಈ ಹಿಂದೆ ಅರ್ಜಿ ಸಲ್ಲಿಸಿ ಸಿಬಿಐ ತನಿಖೆಗೆ ಕೋರಿದ್ದರು. ಹೀಗಾಗಿ ಸುಪ್ರೀಂ ಕೋರ್ಟ್ ಮೂರು ತಿಂಗಳೊಳಗೆ ತನಿಖೆ ನಡೆಸಿ ನ್ಯಾಯಾಲಯಕ್ಕೆ ತನಿಖಾ ವರದಿ ಸಲ್ಲಿಸುವಂತೆ ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ಚೆನ್ನೈ ಸಿಬಿಐ ತಂಡ ಮಡಿಕೇರಿ ಹಾಗೂ ಬೆಂಗಳೂರಿನಲ್ಲಿ ತನಿಖೆ ಕೈಗೊಂಡಿದೆ.


ಸಂಬಂಧಿತ ಟ್ಯಾಗ್ಗಳು

CBI supreme court ಡಿವೈಎಸ್‍ಪಿ ಮಡಿಕೇರಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ