ಉದ್ಯಮಿ ಮೇಲೆ ಊಬರ್ ಚಾಲಕರ ಹಲ್ಲೆ

Kannada News

15-11-2017

ಬೆಂಗಳೂರು: ದೇವನಹಳ್ಳಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ವಾಹನ ನಿಲುಗಡೆ ಜಾಗದಲ್ಲಿ ಸೀಟ್ ಬೆಲ್ಟ್ ಹಾಕಿಕೊಳ್ಳುವ ವಿಚಾರದಲ್ಲಿ ಜಗಳ ತೆಗೆದು ಮುಂಬೈ ಮೂಲದ ಉದ್ಯಮಿ ದೇವ್ ಬ್ಯಾನರ್ಜಿ ಮೇಲೆ ಊಬರ್ ಕ್ಯಾಬ್‍ನ ಚಾಲಕರು ಹಲ್ಲೆ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ.

ಹಲ್ಲೆಗೊಳಗಾಗಿರುವ ಉದ್ಯಮಿ ದೇವ್ ಬ್ಯಾನರ್ಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಪೊಲೀಸರಿಗೆ ದೂರು ನೀಡಿದ್ದಾರೆ. ತನ್ನ ಸ್ನೇಹಿತನ ಜೊತೆ ಕಳೆದ ರಾತ್ರಿ ಮುಂಬೈಯಿಂದ ಬೆಂಗಳೂರಿಗೆ ಬರಲು ಊಬರ್ ಕ್ಯಾಬ್ ಬುಕ್ ಮಾಡಿದರು. ಆದರೆ ಕ್ಯಾಬ್ ಚಾಲಕ ಸೀಟ್ ಬೆಲ್ಟ್ ಹಾಕಿರಲಿಲ್ಲ. ಇದನ್ನು ಪ್ರಶ್ನಿಸಿದ್ದಕ್ಕೆ ಕ್ಯಾಬ್ ಚಾಲಕ ಕೋಪಗೊಂಡಿದ್ದಾನೆ.

ಚಾಲಕ ವರ್ತನೆಯಿಂದ ಬೇಸತ್ತ ದೇವ್ ಹಾಗೂ ಅವರ ಸ್ನೇಹಿತ ಆ ಕ್ಯಾಬ್ ನಿರಾಕರಿಸಿ ಮತ್ತೊಂದು ಕ್ಯಾಬ್ ಹತ್ತಿದ್ದರು. ದೇವ್ ಕ್ಯಾಬ್ ನಿರಾಕರಿಸಿದಕ್ಕೆ ಊಬರ್ ಕ್ಯಾಬ್ ನ ಚಾಲಕ ಸಿಟ್ಟಿಗೆದ್ದಿದ್ದಾನೆ. ನಂತರ ಚಾಲಕನ ಜೊತೆಗೆ ಇತರ ಚಾಲಕರು ಸೇರಿ ಊಬರ್ ಕ್ಯಾಬ್ ಪಾರ್ಕಿಂಗ್ ರಸ್ತೆಯಲ್ಲಿ ದೇವ್ ಇದ್ದ ಕ್ಯಾಬ್ ನನ್ನು ಅಡ್ಡಗಟ್ಟಿದ್ದಾರೆ. ನಂತರ ಸುಮಾರು 30 ನಿಮಿಷಕ್ಕೂ ಹೆಚ್ಚು ಸಮಯ ದೇವ್ ಮೇಲೆ ಹಲ್ಲೆ ನಡೆಸಿದ್ದಾರೆ.

ಊಬರ್ ಚಾಲಕರ ಥಳಿತಕ್ಕೆ ಹೆದರಿದ ದೇವ್ ಪ್ರಜ್ಞೆ ತಪ್ಪಿದ ರೀತಿ ನಾಟಕ ಮಾಡಿದ್ದಾರೆ. ದೇವ್ ಪ್ರಜ್ಞೆ ತಪ್ಪಿದ್ದನ್ನು ನೋಡಿ ಊಬರ್ ಚಾಲಕರು ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಬಳಿಕ ಸ್ನೇಹಿತನ ಸಹಾಯದಿಂದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುವ ದೇವ್ ಏರ್ ಪೋರ್ಟ್ ಠಾಣೆಯಲ್ಲಿ ದೂರು ನೀಡಲಾಗಿದ್ದು ತನಿಖೆ ಕೈಗೊಳ್ಳಲಾಗಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ