ಎಸಿಪಿ ದರ್ಪ: ದೃಶ್ಯಗಳು ಬಹಿರಂಗ...!

Kannada News

15-11-2017

ಬೆಂಗಳೂರು: ಆರ್.ಟಿ.ನಗರದ ದಿಣ್ಣೂರ ರಸ್ತೆಯಲ್ಲಿ ಮಧ್ಯರಾತ್ರಿ 12 ಗಂಟೆ ಸಮೀಪಿಸುತ್ತಿದ್ದರೂ ಹೊಟೇಲ್ ಬಾಗಿಲು ಮುಚ್ಚದೇ ವ್ಯಾಪಾರ ನಡೆಸುತ್ತಿದ್ದ ಹೊಟೇಲ್ ಮಾಲೀಕನಿಗೆ ಸಹಾಯಕ ಪೊಲೀಸ್ ಆಯುಕ್ತ(ಎಸಿಪಿ)ರೊಬ್ಬರು ಲಾಠಿ ರುಚಿ ತೋರಿಸಿದ ದೃಶ್ಯಗಳು ಬಹಿರಂಗಗೊಂಡು ನಗರ ಪೊಲೀಸರನ್ನು ಪೇಚಿಗೆ ಸಿಲುಕಿಸಿದೆ.

ದಿಣ್ಣೂರು ರಸ್ತೆಯಲ್ಲಿರುವ ಶೆಟ್ಟಿ ಲಂಚ್ ಹೋಂ ಹೊಟೇಲ್‍ ಅನ್ನು ಕಳೆದ ಗುರುವಾರ(ನ.9ರಂದು) ರಾತ್ರಿ 11.55 ಗಂಟೆಯಾಗಿದ್ದರೂ ತೆಗೆದು ವ್ಯಾಪಾರ ನಡೆಸಲಾಗುತ್ತಿತ್ತು. ಅಲ್ಲಿಗೆ ಬಂದ ಆರ್.ಟಿ.ನಗರ ಎಸಿಪಿ ಮಂಜುನಾಥ ಬಾಬು ಅವರು, ಹೊಟೇಲ್ ಬಾಗಿಲು ಮುಚ್ಚುವಂತೆ ಮಾಲೀಕನಿಗೆ ಸೂಚಿಸಿದರಾದರೂ ಆತ ಪ್ರತಿರೋಧ ತೋರಿದ್ದರಿಂದ ಲಾಠಿ ರುಚಿ ತೋರಿಸಿದ್ದಾರೆ. ಲಂಚ್ ಹೋಂ ಮಾಲೀಕ ರಾಜೀವ ಶೆಟ್ಟಿ ಅವರಿಗೆ ಲಾಠಿಯಿಂದ ಹೊಡೆಯುತ್ತಿರುವ ದೃಶ್ಯಗಳು ಸಿಸಿ ಟಿವಿ ಕ್ಯಾಮಾರದಲ್ಲಿ ಸೆರೆಯಾಗಿವೆ.

ಪೊಲೀಸರ ದೌಜನ್ಯ ಕಂಡು ಲಂಚ್ ಹೋಂನಲ್ಲಿದ್ದ ಗ್ರಾಹಕರು ಭಯಭೀತಗೊಂಡು ಓಡಿ ಹೋಗಿದ್ದು, ನಾನು ಬಾಗಿಲು ಮುಚ್ಚುತ್ತೇನೆ ಎಂದು ಹೇಳಿದರೂ ಮಂಜುನಾಥ್ ಲಾಟಿಯಿಂದ ಮನಬಂದತೆ ಥಳಿಸಿದ್ದಾರೆ ಎಂದು ರಾಜೀವ ಶೆಟ್ಟಿ ಆರೋಪಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ಅವಧಿ ಮುಗಿದರೂ ಹೊಟೇಲ್ ಬಾಗಿಲು ತೆಗೆದು ವ್ಯಾಪಾರ ಮಾಡುತ್ತಿದ್ದು ಎಷ್ಟು ಹೇಳಿದರೂ ಕೇಳದೇ ರಾಜೀವ್ ಶೆಟ್ಟಿ ಮಧ್ಯರಾತ್ರಿಯವರೆಗೆ ವ್ಯಾಪಾರ ಮುಂದುವರೆಸಿದ್ದರು. ಹೊಟೇಲ್ ಬಳಿ ಹೆಚ್ಚು ಜನ ಸೇರಿ ಕಾನುನು ಸುವ್ಯವಸ್ಥೆಗೆ ತೊಂದರೆ ಉಂಟಾಗುತ್ತಿದ್ದರಿಂದ ಲಾಠಿಯಿಂದ ಎಚ್ಚರಿಕೆ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

commissioner Police ಸಿಸಿ ಟಿವಿ ಪ್ರತಿರೋಧ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ