ಊಟ ವಿಳಂಬ: ಕ್ರೂರಿಯಾದ ಗಂಡ

Kannada News

15-11-2017

ಬೆಂಗಳೂರು: ಹಳೆಯ ಮನೆಯನ್ನು ಕೆಡವುತ್ತಿದ್ದ ಕೆಲಸದಲ್ಲಿ ತೊಡಗಿದ್ದಾಗ ಊಟ ತರಲು ವಿಳಂಬ ಮಾಡಿದ ಪತ್ನಿಯನ್ನು, ಆಕ್ರೋಶಗೊಂಡ ಪತಿ ಕೈಯಲ್ಲಿದ್ದ ಕಬ್ಬಿಣ ಗಡಾರಿಯಿಂದಲೇ ಆಕೆಯ ಕುತ್ತಿಗೆಗೆ ಇರಿದು ಭೀಕರವಾಗಿ ಕೊಲೆಗೈದ ದುರ್ಘಟನೆ ಗೌರಿಬಿದನೂರು ತಾಲ್ಲೂಕಿನ ಎಂ.ಗುಂಡ್ಲಹಳ್ಳಿಯಲ್ಲಿ ನಡೆದಿದೆ.

ಎಂ.ಗುಂಡ್ಲಹಳ್ಳಿಯ ಅಮೃತಾ(30)ಕೊಲೆಯಾದವರು, ಕೃತ್ಯವೆಸಗಿದ ಪಾಪಿ ಪತಿ ನಾಗರಾಜ್ ಪರಾರಿಯಾಗಿದ್ದಾನೆ. ಅಮೃತಾಳನ್ನ ಪ್ರೀತಿಸಿ ಮದುವೆಯಾಗಿದ್ದ ನಾಗರಾಜ್ ಪತ್ನಿಯ ಮನೆಯಲ್ಲೇ ವಾಸವಾಗಿದ್ದನು. ಇನ್ನೂ ಇಬ್ಬರ ಸುಖ ದಾಂಪತ್ಯಕ್ಕೆ ಸಾಕ್ಷಿ 6 ವರ್ಷದ ಹೆಣ್ಣು ಮಗಳು ಹಾಗೂ 3 ವರ್ಷದ ಗಂಡು ಮಗನಿದ್ದಾನೆ. ಮದುವೆಯಾದ ಹೊಸತರಲ್ಲಿ ಚೆನ್ನಾಗಿಯೇ ಇದ್ದ ನಾಗರಾಜ್ ಸಣ್ಣ ಪುಟ್ಟ ವಿಚಾರಕ್ಕೂ ಪದೇ ಪದೇ ಕ್ಯಾತೆ ತೆಗೆದು ಅಮೃತಾ ಜೊತೆ ಜಗಳ ಮಾಡುತ್ತಿದ್ದನು. ಬುಧವಾರ ಸರ್ಕಾರದಿಂದ ನೂತನ ಮನೆ ನಿರ್ಮಾಣಕ್ಕೆ ಹಣ ಮಂಜೂರಾದ ಕಾರಣ ಹಳೆಯ ಮನೆ ಕೆಡವಿ ಅದನ್ನ ಸ್ಬಚ್ಛಗೊಳಿಸಿ ಹೊಸ ಮನೆ ಕಟ್ಟಲು ನಿವೇಶನ ಅಣಿಗೊಳಿಸುತ್ತಿದ್ದನು. ಆದರೆ ಮನೆಯಿಂದ ಪತ್ನಿ ಅಮೃತಾ ಊಟ ತರುವುದು ಸ್ವಲ್ಪ ತಡವಾಗಿದೆ.

ಊಟ ತಡವಾಗಿ ತಂದಿದ್ದು ಯಾಕೆ ಅಮೃತ ನಾಗರಾಜ್ ಜೊತೆ ಜಗಳ ಆರಂಭಿಸಿದ್ದಾನೆ. ಕೊನೆಗೆ ಕೈಯಲ್ಲಿದ್ದ ಗಡಾರಿಯಿಂದಲೇ ಅಮೃತಾರ ಕುತ್ತಿಗೆಗೆ ಇರಿದಿದ್ದಾನೆ. ಅಮೃತಾ ಸ್ಥಳದಲ್ಲೇ ಸಾವನ್ನಪ್ಪಿದ್ದು, ಘಟನೆ ಬಳಿಕ ಪತಿ ನಾಗರಾಜ್ ನಾಪತ್ತೆಯಾಗಿದ್ದಾನೆ. ಈ ಸಂಬಂಧ ಸ್ಥಳಕ್ಕೆ ಮಂಚೇನಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇನ್ನೂ ನಾಪತ್ತೆಯಾಗಿರುವ ಆರೋಪಿ ನಾಗರಾಜ್ ಪತ್ತೆಗಾಗಿ ಬಲೆ ಬೀಸಿದ್ದಾರೆ.

 


ಸಂಬಂಧಿತ ಟ್ಯಾಗ್ಗಳು

Murder Gauribidanur ದಾಂಪತ್ಯ ಕೊಲೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ