ಲಂಗ ಮತ್ತು ಲಫಂಗರು..!

Kannada News

15-11-2017

ಅಕಸ್ಮಾತ್ ಆಗಿ ನಿಮಗೆ ಅಪ್‌ ಸ್ಕರ್ಟಿಂಗ್ ಅನ್ನೋ ಒಂದು ಇಂಗ್ಲಿಷ್ ಪದವೇನಾದ್ರೂ ಗೊತ್ತಾ? ಹೋಗಲಿ ಬಿಡಿ, ಸ್ಕರ್ಟ್ ಅಂತೂ ಗೊತ್ತಲ್ಲಾ? ಅದೇ, ಹಿಂದಿನ ಕಾಲದಲ್ಲಿ ಪುಟ್ಟ ಪುಟ್ಟ ಹೆಣ್ಣು ಮಕ್ಕಳು ಮಾತ್ರ ಧರಿಸಿ ಪುಟ್ಟ ಪುಟ್ಟ ಹೆಜ್ಜೆಗಳನ್ನಿಡುತ್ತಾ ಓಡಾಡುತ್ತಿದ್ದ ಮತ್ತು ಇಂದಿನ ಕಾಲದಲ್ಲಿ ಫ್ಯಾಷನ್ ಪ್ರಿಯ ಲೇಡಿಸ್‌ ಹೆಚ್ಚಾಗಿ ಧರಿಸುವ ಲಂಗ ಅಥವ ತುಂಡು ಲಂಗ.

ಸರಿ ಈಗ ಈ  ಅಪ್‌ ಸ್ಕರ್ಟಿಂಗ್ ಬಗ್ಗೆ ಹೇಳಿದರೆ ನಿಮಗೆ ಸುಲಭವಾಗಿ ಅರ್ಥ ಆಗುತ್ತೆ ಅನ್ಸುತ್ತೆ. ಸ್ಕರ್ಟ್ ಧರಿಸಿ ತಿರುಗಾಡುವ ಲಲನೆಯರ ಉಡುಪಿನ ಕೆಳಭಾಗದಿಂದ ಫೊಟೊ ಅಥವ ವಿಡಿಯೊ ತೆಗೆಯುವ ಕಿಡಿಗೇಡಿಗಳ ಕೆಲಸವನ್ನು ಅಪ್ ಸ್ಕರ್ಟಿಂಗ್ ಎಂದು ಹೇಳಲಾಗುತ್ತದೆ. ಬಸ್ಸು, ರೈಲುಗಳಲ್ಲಿ ಸಂಚರಿಸುವಾಗ, ಮಾಲ್‌ಗಳಲ್ಲಿ ಓಡಾಡುವಾಗ, ಪಾರ್ಕ್‌ಗಳಲ್ಲಿ ಕುಳಿತಿದ್ದಾಗ ಹೇಗೋ ಮಾಡಿ, ಯಾರಿಗೂ ಗೊತ್ತಾಗದಂತೆ ಲಂಗಧಾರಿ ವನಿತಾಮಣಿಗಳ ಉಡುಪಿನ ಕೆಳಭಾಗದಿಂದ ಚಿತ್ರ ಸೆರೆಹಿಡಿಯುವ ಅಪ್ ಸ್ಕರ್ಟಿಂಗ್ ಕೂಡ, ಒಂದು ರೀತಿಯ ಲೈಂಗಿಕ ಕಿರುಕುಳವೇ ಆಗಿದೆ. ಆದರೆ, ಈ ರೀತಿ ಮಾಡಿದವರನ್ನು ಶಿಕ್ಷೆಗೆ ಗುರಿಪಡಿಸಲು ಸರಿಯಾದ ಕಾನೂನುಗಳಿಲ್ಲ.

ಕೆಲವರು ಮಾಡುವ ಇಂಥ ಚೇಷ್ಟೆಗಳನ್ನು ಸಹಿಸಿ ಬೇಸತ್ತ ರಷ್ಯಾದ ಹುಡುಗಿಯೊಬ್ಬಳು ಏನು ಮಾಡಿದಳು ಗೊತ್ತಾ? ಸೆಂಟ್ ಪೀಟರ್ಸ್‌ ಬರ್ಗ್‌ ರೈಲು ನಿಲ್ದಾಣದಲ್ಲಿ ಒಳಉಡುಪನ್ನು ಪ್ರದರ್ಶಿಸುತ್ತಾ ನಿಂತಳು. ‘ಹೇಯ್ ಇಲ್ಲಿ ನೋಡಿಕೊಳ್ಳಿ ಮತ್ತು ನಮ್ಮಿಂದ ದೂರ ಇರಿ’ ಅನ್ನುವುದು ಈ ಇಣುಕು ಚಟದವರಿಗೆ ಈಕೆ ನೀಡಿದ ಸಂದೇಶ.

 


ಸಂಬಂಧಿತ ಟ್ಯಾಗ್ಗಳು

Russia Fashion ಅಪ್‌ ಸ್ಕರ್ಟಿಂಗ್ ಮಾಲ್‌


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


Ffssass
  • Ss
  • Professional