ಫ್ರೀ ದರ್ಶನ v/s ಪೇಮೆಂಟ್ ದರ್ಶನ

Kannada News

15-11-2017

ತುಂಬಾ ಹೆಸರುವಾಸಿಯಾಗಿರೋ ಹಲವು ದೇವಸ್ಥಾನಗಳಲ್ಲಿ ಮತ್ತು ಪುಣ್ಯ ಕ್ಷೇತ್ರಗಳಿಗೆ ಪ್ರತಿ ದಿನ ಸಾವಿರಾರು ಜನ ಭೇಟಿ ನೀಡುತ್ತಾರೆ. ಇಂಥ ಬಹುತೇಕ ದೇಗುಲಗಳಲ್ಲಿ ಹಣ ಕೊಟ್ಟವರಿಗೆ ವಿಶೇಷ ದರ್ಶನದ ವ್ಯವಸ್ಥೆ ಇರುತ್ತದೆ, ಜೊತೆಗೆ ಇತರೆಯವರಿಗಿಂತ ಹತ್ತಿರದಲ್ಲಿ ನಿಂತು, ಒಂದಿಷ್ಟು ಹೆಚ್ಚು ಹೊತ್ತು ದೇವರ ದರ್ಶನ ಮಾಡುವ ಅವಕಾಶವನ್ನೂ ನೀಡಲಾಗುತ್ತದೆ.  ಹಣ ಕೊಡಲಾಗದ ಸಾಮಾನ್ಯ ಜನರು ತುಂಬಾ ಹೊತ್ತು ಕ್ಯೂ ನಲ್ಲಿ ನಿಂತು ಸುಸ್ತಾಗಿ, ಕಡೆಯಲ್ಲಿ ಸಾಕಷ್ಟು ದೂರದಿಂದ ಒಂದು ಕ್ಷಣದ ಅರ್ಧಭಾಗದೊಳಗೆ ದೇವರ ‘ದರ್ಶನ’ ಮಾಡಿ ಓಡಬೇಕಾಗುತ್ತದೆ.

ತಮಿಳುನಾಡಿನ ಕೆಲವು ದೇಗುಲಗಳಲ್ಲೂ ನಡೆಯುತ್ತಿದ್ದ ಈ ರೀತಿಯ ಪದ್ಧತಿಯನ್ನು ನಿಲ್ಲಿಸುವಂತೆ ಮದ್ರಾಸ್ ಹೈ ಕೋರ್ಟ್ ನಿರ್ದೇಶನ ನೀಡಿದೆ. ಪೇಮೆಂಟ್ ದರ್ಶನ ಮತ್ತು ಫ್ರೀ ದರ್ಶನಗಳ ನಡುವೆ ಬೇಧ ಮಾಡಬಾರದು, ಎಲ್ಲರೂ ಸಮಾನ ದೂರದಲ್ಲಿ ನಿಂತು, ಹೆಚ್ಚೂ ಕಮ್ಮಿ ಸಮಾನ ಸಮಯದವರೆಗೂ ದೇವರನ್ನು ನೋಡಲು ಅವಕಾಶ ಮಾಡಿಕೊಡಬೇಕು ಎಂದು ಕೋರ್ಟ್ ಸೂಚನೆ ನೀಡಿದೆ.

ತಮಿಳುನಾಡಿನ ಶ್ರೀವಿಲ್ಲುಪುತ್ತೂರಿನ ಆಂಡಾಳ್ ದೇಗುಲ, ಕಂಚಿಯ ಏಕಾಂಬರ ನಾಥ ದೇಗುಲ ಮತ್ತು ತಿರುನಾಗೇಶ್ವರದ ಒಪ್ಪಿಲಿಯಪ್ಪನ್ ದೇಗುಲದಲ್ಲಿ ಈ ರೀತಿ ಹಣ ನೀಡಿದವರು ಮತ್ತು ಇತರರ ನಡುವೆ ತಾರತಮ್ಯ ಮಾಡುತ್ತಾರೆಂದು ಕೋರ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿತ್ತು. ‘ಹಣವನ್ನು ಆಧರಿಸಿ, ಸಮಾನರಲ್ಲಿ ಭಿನ್ನತೆ ಸೃಷ್ಟಿಸುವುದು ಸರಿಯಲ್ಲ’ ಎಂದು ಕೋರ್ಟ್ ಹೇಳಿದೆ. ಫ್ರೀ ದರ್ಶನ ಮತ್ತು ಪೇಯ್ಡ್ ದರ್ಶನಗಳ ವ್ಯವಸ್ಥೆ ಇರುವ ಇನ್ನೂ ಅನೇಕ ಸುಪ್ರಸಿದ್ಧ ದೇಗುಲಗಳ ಆಡಳಿತ ಮಂಡಳಿಗಳು, ಬಡವರು ಮತ್ತು ಶ್ರೀಮಂತರ ನಡುವೆ ತಾರತಮ್ಯ ಮಾಡುವುದನ್ನು ಇನ್ನು ಮುಂದಾದರೂ ನಿಲ್ಲಿಸುತ್ತಾರಾ?


ಸಂಬಂಧಿತ ಟ್ಯಾಗ್ಗಳು

High Court Madras ತಮಿಳುನಾಡು ಪೇಮೆಂಟ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ