‘ಪದ್ಮಾವತಿ’ ವಿರೋಧಿಸಿ ಪ್ರತಿಭಟನೆ

Kannada News

15-11-2017

ಬೆಂಗಳೂರು: ರಾಷ್ಟ್ರೀಯ ರಜಪೂತ್ ಕರಣಿ ಸೇನಾ ಕರ್ನಾಟಕ ಸಂಘಟನೆ ಹಾಗೂ ಹಿಂದೂ ಸಂಘಟನೆ ವತಿಯಿಂದ, ಬಾಲಿವುಡ್ ನ ಪದ್ಮಾವತಿ ಸಿನೆಮಾ ಬಿಡುಗಡೆ ವಿರೋಧಿಸಿ ನಗರದಲ್ಲಿ ಪ್ರತಿಭಟನೆ ನಡೆಸಿದೆ. ಭಾರತೀಯ ಇತಿಹಾಸವನ್ನು ತಿರುಚಿ ಪದ್ಮಾವತಿ ಸಿನೆಮಾ ಮಾಡಲಾಗಿದೆ ಎಂದು, ಪ್ರತಿಭಟನಾಕಾರರು ಆರೋಪಿಸಿದ್ದಾರೆ. ಹಿಂದೂ ಸಂಸ್ಕೃತಿಯ ಉಡುಗೆ ತೊಡುಗೆಯನ್ನು ಮತ್ತು ಅಂಗಪ್ರದರ್ಶನವನ್ನು ತಿರುಚಿ ತೋರಿಸಲಾಗಿದೆ ಎಂದು ಸಿನೆಮಾ ಬಿಡುಗಡೆಯನ್ನು ಖಂಡಿಸಿ, ಸ್ವಾಭಿಮಾನಿ ಯಾತ್ರೆಯನ್ನು ಟೌನ್ ಹಾಲ್ ಯಿಂದ ಫ್ರೀಡಂ ಪಾರ್ಕ್ವರೆಗೆ ನಡೆಸಿದ್ದಾರೆ.

ಅಲ್ಲಾವುದ್ದೀನ್ ಖಿಲ್ಜಿ ಒಬ್ಬ ದಾಳಿಕೋರ, ಅಷ್ಟೇ ಯಾಕೆ ಅತ್ಯಾಚಾರಿ ಹಾಗೂ ವ್ಯಾಮೋಹಿ ಕೂಡ. ಈತನನ್ನು ಮುಖ್ಯ ನಾಯಕನನ್ನಾಗಿ ತೋರಿಸಿದ್ದಾರೆ, ಈ ಹಿನ್ನಲೆಯಲ್ಲಿ ಸಿನಿಮಾ ರಿಲೀಸ್ ಆಗದಂತೆ ವಿರೋಧ ವ್ಯಕ್ತಪಡಿಸುತ್ತಿರುವುದಾಗಿ, ರಾಷ್ಟ್ರೀಯ ರಜಪೂತ್ ಕರಣಿ ಸೇನಾ ಮುಖಂಡರು ತಿಳಿಸಿದರು.


ಸಂಬಂಧಿತ ಟ್ಯಾಗ್ಗಳು

Bollywood Padmavati ರಜಪೂತ್ ಕರಣಿ ಇತಿಹಾಸ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ