ವೈದ್ಯರ ಮುಷ್ಕರಕ್ಕೆ ಮತ್ತೊಂದು ಬಲಿ

Kannada News

15-11-2017 226

ಬಾಗಲಕೋಟೆ: ರಾಜ್ಯಾದ್ಯಂತ ವೈದ್ಯರ ಮುಷ್ಕರದಿಂದ ಸೂಕ್ತ ಸಮಯಕ್ಕೆ ಚಿಕಿತ್ಸೆ ದೊರೆಯದೆ ನಿನ್ನೆಯಷ್ಟೆ 8 ಮಂದಿ ಮೃತಪಟ್ಟಿರುವುದು ವರದಿಯಾಗಿದ್ದು, ಇಂದೂ ಕೂಡ ವೈದ್ಯರ ಮುಷ್ಕರಕ್ಕೆ ಮತ್ತೊಬ್ಬ ವ್ಯಕ್ತಿ ಪ್ರಾಣ ಕಳೆದುಕೊಂಡಿದ್ದಾನೆ. ಬಾಗಲಕೋಟೆ ಜಿಲ್ಲೆಯ ಮುಧೋಳದಲ್ಲಿ ಚಿಕಿತ್ಸೆ ಸಿಗದೇ, ವಿಠ್ಠಲ ಭಜಂತ್ರಿ (39)ಎಂಬ ವ್ಯಕ್ತಿ ಮೃತಪಟ್ಟಿದ್ದಾರೆ.

ಹೃದಯ ಸಂಭಂದಿ ಕಾಯಿಲೆಯಿಂದ ಬಳಲುತ್ತಿದ್ದ ವಿಠ್ಠಲ ಭಜಂತ್ರಿ, ಕಳೆದ ಎರಡು ದಿನಗಳಿಂದ ಚಿಕಿತ್ಸೆಗಾಗಿ ಅಲೆದಾಡಿದ್ದಾರೆ. ಆದರೆ ಮುಷ್ಕರದ ಹಿನ್ನೆಲೆ ಹೊರರೋಗಿ ವಿಭಾಗಗಳು ಬಹುತೇಕ ಮುಚ್ಚಿದ್ದು, ಚಿಕಿತ್ಸೆಗಾಗಿ ಪರದಾಡಿದ್ದಾರೆ. ಇಂದು ಬೆಳಿಗ್ಗೆ ತೀವ್ರ ನೋವು ಕಾಣಿಸಿಕೊಂಡಿದ್ದು, ಚಿಕಿತ್ಸೆ ಸಿಗದೆ ಸಾವನ್ನಪ್ಪಿದ್ದಾರೆ. ಮೃತ ವಿಠ್ಠಲ ಬುಟ್ಟಿ ಹೆಣೆಯುವ ಕಾಯಕದೊಂದಿಗೆ ಕೂಲಿ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ವೈದ್ಯರ ಮುಷ್ಕರಕ್ಕೆ ಮೃತ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Heart Disease Bagalkot ಚಿಕಿತ್ಸೆ ಹೃದಯ ಸಂಭಂದಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ