ಯವತಿ ಮೇಲೆ ಗ್ಯಾಂಗ್ ರೇಪ್..!

Kannada News

15-11-2017 575

ಬೆಂಗಳೂರು: ಪಾರ್ಟಿ ಮಾಡುವ ನೆಪದಲ್ಲಿ ಯುವತಿಯೊರ್ವಳನ್ನು ಕರೆದು, ಆಕೆ ಮೇಲೆ ಗ್ಯಾಂಗ್ ರೇಪ್ ನಡೆಸಿದ ಪೈಶಾಚಿಕ ಕೃತ್ಯ, ತಡವಾಗಿ ಬೆಳಕಿಗೆ ಬಂದಿದೆ. ನಗರದ ಕಾಡುಗೋಡಿಯಲ್ಲಿ  ಘಟನೆ ನಡೆದಿದೆ. ಕೃತ್ಯ ಎಸಗಿದ ನಾಲ್ವರೂ ಯುವತಿಯ ಕ್ಲಾಸ್ ಮೇಟ್ ಗಳೆಂದು ತಿಳಿದು ಬಂದಿದೆ. ಯುವತಿಯನ್ನು ಗೃಹ ಬಂಧನದಲ್ಲಿಟ್ಟು 10 ದಿನ ನಿರಂತರ ಅತ್ಯಾಚಾರ ವೆಸಗಿದ್ದಾರೆ. ಕ್ಲಾಸಿಕ್ ಇನ್ ಲಾಡ್ಜ್ ನಲ್ಲಿ ಈ ಕೃತ್ಯ ಎಸಗಿದ್ದು, ಲಾಡ್ಜ್ ಮಾಲೀಕ ಸೇರಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಉಡುಪಿಯ ರಾಘವೇಂದ್ರ, ಪಶ್ಚಿಮ ಬಂಗಾಳದ ಮನೋರಾಜನ್ ಪಂಡಿತ್, ದಾವಣಗೆರೆಯ ಸಾಗರ್, ಮೈಸೂರಿನ ಮಂಜುರಾಜ್ ಬಂಧಿತ ಕಾಮುಕರು. ಯುವತಿಯು ಪ್ರತಿಷ್ಟಿತ ಖಾಸಗಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದು, ಸ್ನೇಹಿತರೇ ತನ್ನ ಮೇಲೆ ದುಷ್ಕೃತ್ಯ ಎಸಗಿರುವುದಕ್ಕೆ ಆಘಾತಕ್ಕೊಳಗಾಗಿದ್ದಾರೆ. ಇನ್ನು ಈ ವಿಚಾರ ನಗರದ ಜನರನ್ನು ಮತ್ತಷ್ಟು ಬೆಚ್ಚಿಬೀಳಿಸುವಂತೆ ಮಾಡಿದೆ.  

 


ಸಂಬಂಧಿತ ಟ್ಯಾಗ್ಗಳು

Rape Bangaluru ಅತ್ಯಾಚಾರ ಪೈಶಾಚಿಕ ಕೃತ್ಯ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ