ಬೇಕರಿ ಬ್ಲಾಸ್ಟ್ ಗೆ ಕಳ್ಳನ ಖತರ್ನಾಕ್ ಐಡಿಯಾ

Kannada News

15-11-2017 271

ವಿಜಯಪುರ: ಬೇಕರಿಯಲ್ಲಿ ಕಳ್ಳತನಕ್ಕೆ ಬಂದು, ಬೇಕರಿಯನ್ನೆ ಬ್ಲಾಸ್ಟ್ ಮಾಡಲು ಕಳ್ಳನೊಬ್ಬ ಯತ್ನಿಸಿದ್ದಾನೆ. ಆದರೆ ಅದೃಷ್ಟವಶಾತ್  ಭಾರೀ ಅನಾಹುತವೊಂದು ತಪ್ಪಿದೆ. ವಿಜಯಪುರದ ಬಸವೇಶ್ವರ ವೃತ್ತದಲ್ಲಿರುವ ಕೇಕ್ ವಾಲಾ ಬೇಕರಿಯಲ್ಲಿ ಘಟನೆ ನಡೆದಿದೆ. ಕಳ್ಳತನಕ್ಕೆಂದು ಬಂದಿದ್ದ ಕಳ್ಳನೊಬ್ಬ, ತಾನು ಕಳ್ಳತನ ನಡೆಸಿದ ದೃಶ್ಯಗಳು ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದ್ದನ್ನು ಗಮನಿಸಿ, ಸಿಕ್ಕಿಹಾಕಿಕೊಳ್ಳಬಾರದು ಎಂಬ ದುರುದ್ದೇಶದಿಂದ ಸಿಲಿಂಡರ್ ಬ್ಲಾಸ್ಟ್ ಮಾಡಲು ಯತ್ನಿಸಿದ್ದಾನೆ.

ಅದಕ್ಕಾಗಿ ಬೇಕರಿಯಲ್ಲಿ ಇದ್ದ ಒಲೆ ಹೊತ್ತಿಸಿ, ಅದರ ಮೇಲೆ ಮತ್ತೊಂದು ಸಿಲಿಂಡರ್ ಇಟ್ಟು ಪರಾರಿಯಾಗಿದ್ದಾನೆ. ಬೆಳಗಿನ ವರೆಗೂ ಹೊತ್ತಿ ಉರಿದ ಸಿಲಿಂಡರ್ ಅದೃಷ್ಟವಶಾತ್ ಬ್ಲಾಸ್ಟ್ ಆಗಿಲ್ಲ. ಸಿಲಿಂಡರ್ ಬ್ಲಾಸ್ಟ್ ಆಗಿದ್ದರೆ ಕಟ್ಟಡದ ಧ್ವಂಸ ಆಗುವುದರ ಜೊತೆಗೆ ಇಪ್ಪತ್ತು ಕಾರ್ಮಿಕರು ಸಾವನ್ನಪ್ಪುತ್ತಿದ್ದರು. ಆದರೆ ಭಾರೀ ಅನಾಹುತ ತಪ್ಪಿದೆ. ಈ ಕುರಿತು ಗಾಂಧಿಚೌಕ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

 

 

 

 


ಸಂಬಂಧಿತ ಟ್ಯಾಗ್ಗಳು

gas cylinder Vijayapura ಬ್ಲಾಸ್ಟ್ ಸಿಸಿಟಿವಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ