ಶಾಸಕನ ದರ್ಪ ಖಂಡಿಸಿ ಗಂಗಾವತಿ ಬಂದ್

Kannada News

15-11-2017

ಕೊಪ್ಪಳ: ಕೊಪ್ಪಳದ ಗಂಗಾವತಿಯ ಶಾಸಕ ಇಕ್ಬಾಲ್ ಅನ್ಸಾರಿ ಅವರ ದುರಾಡಳಿತ, ದರ್ಪ ಖಂಡಿಸಿ ಗಂಗಾವತಿ ನಾಗರಿಕ ಸಮಿತಿಯಿಂದ, ಗಂಗಾವತಿ ಬಂದ್ ಗೆ ಕರೆ ನೀಡಿದ್ದು, ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲ ಅಂಗಡಿಗಳನ್ನು ಸ್ವಯಂಪ್ರೇರಿತವಾಗಿ ಬಂದ್ ಮಾಡಿದ ವ್ಯಾಪಾರಸ್ಥರು ಬೆಂಬಲ ಸೂಚಿಸಿದ್ದಾರೆ. ಇನ್ನು ಎಂದಿನಂತೆ ಬಸ್ ಸಂಚಾರ ಸುಗಮವಾಗಿದ್ದು, ಶಾಲಾ-ಕಾಲೇಜುಗಳು ಎಂದಿನಂತೆ ಕಾರ್ಯನಿರವಹಿಸುತ್ತಿವೆ.

ಇದೇ ವೇಳೆ ಗಂಗಾವತಿ ನಾಗರಿಕ ಸಮಿತಿಯಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಂಡಿದೆ. ಮರೆವಣಿಗೆಯಲ್ಲಿ ಹಲವಾರು ರಾಜಕೀಯ ಮುಖಂಡರು ಭಾಗಿಯಾಗಲಿದ್ದಾರೆ ಎನ್ನಲಾಗಿದೆ. ಪ್ರತಿಭಟನಾ ವೇಳೆ ಅಹಿತಕರ ಘಟನೆಗಳು ನಡೆಯದಂತೆ ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಒಬ್ಬರು ಡಿವೈಸ್ ಪಿ, ಸಿಪಿಐ 6, ಪಿಎಸ್ ಐ 10, ಹಾಗೂ 200 ಮಂದಿ ಪೊಲೀಸರನ್ನು ನಿಯೋಜಿಸಲಾಗಿದೆ. ರಾಯಚೂರು ಎಸ್ಪಿ ನಿಶಾ ಜೇಮ್ಸ್ ಉಸ್ತುವಾರಿ ಯಲ್ಲಿ ಸೂಕ್ತ ಬಂದೋಬಸ್ತ್ ಮಾಡಲಾಗಿದೆ.

 

 


ಸಂಬಂಧಿತ ಟ್ಯಾಗ್ಗಳು

iqbal ansari Koppal ಗಂಗಾವತಿ ಸ್ವಯಂಪ್ರೇರಿತ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ