'ನೂತನ ಜವಳಿ ನೀತಿಯಿಂದ ಉದ್ಯೋಗ ಹೆಚ್ಚಳ'

Kannada News

14-11-2017

ಬೆಳಗಾವಿ: ನೂತನ ಜವಳಿ ನೀತಿಯಡಿ ಕಳೆದ 4 ವರ್ಷಗಳಲ್ಲಿ 90628 ಅಭ್ಯರ್ಥಿಗಳಿಗೆ ಸ್ವಯಂ ಉದ್ಯೋಗ ತರಬೇತಿ ನೀಡಿ, 70817 ಜನರಿಗೆ ಉದ್ಯೋಗವಕಾಶ ಕಲ್ಪಿಸಲಾಗಿದೆ ಎಂದು ಜವಳಿ ಮತ್ತು ಮುಜರಾಯಿ ಸಚಿವ ರುದ್ರಪ್ಪ ಲಮಾಣಿ ಹೇಳಿದರು.

ವಿಧಾನಪರಿಷತ್‍ ನಲ್ಲಿಂದು ಸದಸ್ಯ ಆರ್.ಪ್ರಸನ್ನಕುಮಾರ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯದಲ್ಲಿ ಸುಮಾರು 2939 ಜವಳಿ ಕಾರ್ಖಾನೆಗಳು ಕಾರ್ಯ ನಿರ್ವಹಿಸುತ್ತಿವೆ. ಅಸಂಘಟಿತ ವಲಯದಲ್ಲಿ ಅಂದಾಜು 27ಸಾವಿರ ವಿದ್ಯುತ್ ಮಗ್ಗ ಘಟಕಗಳು ಕಾರ್ಯ ನಿರ್ವಹಿಸುತ್ತಿವೆ. ಕಳೆದ 3 ವರ್ಷಗಳಲ್ಲಿ ಯಾವುದೇ ಜವಳಿ ಕಾರ್ಖಾನೆಗಳು ಮುಚ್ಚಿರುವುದಿಲ್ಲ. ಜವಳಿ ಉದ್ಯಮದಲ್ಲಿ 3,25,007 ಜನ ಮಹಿಳೆಯರು ಹಾಗೂ 1,31,421 ಜನ ಪುರುಷರು ಕೆಲಸ ಮಾಡುತ್ತಿದ್ದಾರೆ. ರಾಜ್ಯದ ಪ್ರಮುಖ 5 ನೇಯ್ಗೆ  ಕಾರ್ಖಾನಗಳಿಂದ ವಾರ್ಷಿಕ ಅಂದಾಜು 509.60 ಲಕ್ಷ ಮೀಟರ್‍ ಗಳ ಬಟ್ಟೆ ಉತ್ಪಾದನೆಯಾಗುತ್ತಿದೆ. ಉಳಿದಂತೆ ರಾಜ್ಯದ ಅಸಂಘಟಿತ ವಲಯದ 27ಸಾವಿರ ವಿದ್ಯುತ್ ಮಗ್ಗಗಳಿಂದ 5ಸಾವಿರ ಲಕ್ಷ ಮೀಟರ್ ಬಟ್ಟೆ ಉತ್ಪಾದನೆಯಾಗುತ್ತಿದೆ. ಈ ಕಾರ್ಖಾನೆಗಳಲ್ಲಿ ಹತ್ತಿ, ರೇಷ್ಮೆ, ಪಾಲಿಸ್ಟರ್, ಡೆನಿಮ್ ಹಾಗೂ ಫರ್ನಿಷಿಂಗ್ ಬಟ್ಟೆಗಳನ್ನು ಉತ್ಪಾದಿಸಲಾಗುತ್ತಿದೆ. ಜವಳಿ ಉದ್ದಿಮೆಯ ಅಭಿವೃದ್ಧಿಗಾಗಿ 45 ದಿನಗಳ ಕೈಮಗ್ಗ ಮತ್ತು ವಿದ್ಯುತ್ ಮಗ್ಗ ನೇಯ್ಗೆ ಮತ್ತು ಹೊಲಿಗೆ ಯಂತ್ರ ಅಪರೇಟಿಂಗ್ ತರಬೇತಿ ನೀಡಲಾಗುತ್ತಿದೆ. ತರಬೇತಿ ನಂತರ ಕೆಲವು ಫಲಾನುಭವಿಗಳು ಸ್ವಯಂ ಉದ್ಯೋಗದಲ್ಲಿ ತೊಡಗಿದ್ದಾರೆ. ಉಳಿದವರಿಗೆ ಖಾಸಗಿ ಕೈಗಾರಿಕೆಗಳಲ್ಲಿ ಉದ್ಯೋಗ ಕಲ್ಪಿಸಲಾಗುತ್ತಿದೆ ಎಂದು ವಿವರಿಸಿದರು.

 


ಸಂಬಂಧಿತ ಟ್ಯಾಗ್ಗಳು

Rudrappa Lamani Minister of textiles ಜವಳಿ ನೀತಿ ಉದ್ಯೋಗ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ