ಶಾಲಾ ಮಕ್ಕಳೊಂದಿಗೆ ಯದುವೀರ್...

Kannada News

14-11-2017

ಮೈಸೂರು: ಮಕ್ಕಳ‌ ದಿನಾಚರಣೆ ಪ್ರಯುಕ್ತ ಶಾಲಾ ವಿದ್ಯಾರ್ಥಿಗಳೊಂದಿಗೆ ರಾಜ ವಂಶಸ್ಥ ಯದುವೀರ್ ಸಂವಾದ ನಡೆಸಿದರು. ಮೈಸೂರು ಅರಮನೆ ಮಂಡಳಿಯ ಕಚೇರಿಯಲ್ಲಿ, ಲಿಸು ಫೌಂಡೇಶನ್ ಸ್ವಯಂ ಸೇವಾ ಸಂಸ್ಥೆಯಿಂದ ಆಯೋಜಿಸಲಾಗಿದ್ದ ಸಂವಾದದಲ್ಲಿ ಯದುವೀರ್ ಭಾಗವಹಿಸಿದ್ದರು. ಕುವೆಂಪು ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳೊಂದಿಗೆ ಸಮಯ ಕಳೆದ ಅವರು, ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ.

ಸಂವಾದದಲ್ಲಿ ರಾಜ ವಂಶಸ್ಥ ಯಧುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಅರಮನೆ ಆಡಳಿತ ಮಂಡಳಿ ಉಪ ನಿರ್ದೇಶಕ ಸುಬ್ರಮಣ್ಯ ಸೇರಿದಂತೆ ಹಲವರು ಭಾಗಿಯಾಗಿದ್ದರು. ಅರಮನೆ ಇತಿಹಾಸ, ರಾಜ ವಂಶಸ್ಥರ ಇತಿಹಾಸ, ಬೆಳೆದು ಬಂದ ದಾರಿ ಬಗ್ಗೆ ಯದುವೀರ್ ಅವರಿಗೆ ವಿದ್ಯಾರ್ಥಿಗಳು ಪ್ರಶ್ನೆ ಕೇಳಿದ್ದು, ವಿದ್ಯಾರ್ಥಿಗಳ ಪ್ರಶ್ನೆಗೆ ಸಮಾಧಾನದಿಂದಲೇ ಉತ್ತರ ನೀಡಿದರು.

 


ಸಂಬಂಧಿತ ಟ್ಯಾಗ್ಗಳು

Yaduveer Mysore Palace ರಾಜ ವಂಶಸ್ಥ ಅರಮನೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ