ಹಣಕ್ಕಾಗಿ ಕಚ್ಚಾಡಿಕೊಂಡ ಕಳ್ಳರು..

Kannada News

14-11-2017 879

ಮಂಡ್ಯ: ಕದ್ದ ಹಣ ಹಂಚಿಕೆ ವಿಚಾರವಾಗಿ ಕಳ್ಳರ ನಡುವೆ ಜಗಳವಾಗಿದ್ದು, ಕಿತ್ತಾಟದ ನಡುವೆ ಓರ್ವ ಕಳ್ಳನಿಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ. ಘಟನೆಯು ಮಂಡ್ಯದ ನಾಗಮಂಗಲ ತಾಲ್ಲೂಕಿನ ದೇವಲಾಪುರ ಗೇಟ್ ಬಳಿ ನಡೆದಿದೆ. ಬೆಂಗಳೂರಿನ ಹೊಸಕೆರೆ ಹಳ್ಳಿಯ ಲೋಕೇಶ್(39)ಎಂಬ ವ್ಯಕ್ತಿಗೆ ಚಾಕುವಿನಿಂದ ಇರಿಯಲಾಗಿದೆ. ಇನ್ನು ಇರಿತಕ್ಕೊಳಗಾದ ಲೋಕೇಶ್ ನನ್ನು ಮಂಡ್ಯ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ. ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.


ಸಂಬಂಧಿತ ಟ್ಯಾಗ್ಗಳು

Mandya Nagamangala ಚಾಕು ಇರಿತ ಮೆಡಿಕಲ್ ಕಾಲೇಜು


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ