ನಗರದಲ್ಲಿ ವಿಜಯನಗರ ಹೆಬ್ಬಾಗಿಲು ಕಟ್ಟಡ

Kannada News

14-11-2017

ಬೆಂಗಳೂರು: ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿರುವ "ವಿಜಯನಗರ ಹೆಬ್ಬಾಗಿಲು "ಸ್ಥಳ ಪರಿಶೀಲನೆಯನ್ನು ಮೇಯರ್ ಸಂಪತ್ ರಾಜ್ ಹಾಗೂ ಕನ್ನಡ ಹೋರಟಗಾರ ವಾಟಳ್ ನಾಗರಾಜ್ ಹಾಗೂ ಕ.ವಿ.ಕಾ.ಅಧ್ಯಕ್ಷ ಎಸ್.ಮನೋಹರ್ ನಡೆಸಿದರು.

ಪರಿಶೀಲನೆಯ ನಂತರ ಮಾತನಾಡಿದ ಕನ್ನಡ ಪರ ಹೋರಾಟಗಾರರಾದ ವಾಟಾಳ್ ನಾಗರಾಜ್, ಮೈಸೂರು ಬ್ಯಾಂಕ್ ವೃತ್ತದಲ್ಲಿ ವಿಜಯನಗರ ಹೆಬ್ಬಾಗಿಲು ಐತಿಹಾಸಿಕ ಇತಿಹಾಸ ಹೊಂದಿದೆ, 1963ರಲ್ಲಿ ಮಾಜಿ ಮುಖ್ಯಮಂತ್ರಿ ನಿಜಲಿಂಗಪ್ಪ ,ಕೆಂಗಲ್ ಹನುಮಂತಯ್ಯ, ಟಿ.ಸಿದ್ದಲಿಂಗಯ್ಯ ಆನೇಕ ಗಣ್ಯ ಮಹನೀಯರುಗಳು ಭಾಗವಹಿಸಿದ ಸ್ಥಳವಾಗಿದೆ. ಕನ್ನಡ ಪರ ನಾಡು, ನುಡಿ ಹೋರಟಗಾರರಿಗೆ ಪ್ರೇರಕ ಶಕ್ತಿ, ಅಭಿಮಾನ ಪೂರಕ ಸ್ಥಳ ವಿಜಯನಗರ ಹೆಬ್ಬಾಗಿಲು ,ಈ ಸ್ಥಳದಲ್ಲಿ ಸಾವಿರಾರು ಹೋರಟಗಳು ನಡೆದ ಇತಿಹಾಸವಿರುವ ಸ್ಥಳ. ವಿಜಯನಗರ ಹೆಬ್ಬಾಗಿಲು ಕಟ್ಟಡ ನಿರ್ಮಾಣಕ್ಕೆ ಮಹಾಪೌರರಾದ ಸಂಪತ್ ರಾಜ್ ರವರ ಅವಧಿಯಲ್ಲಿ ಪೂರ್ಣವಾಗಲಿ ಎಂದು ಹೇಳಿದರು.

ಮಹಾ ಪೌರರಾದ ಸಂಪತ್ ರಾಜ್ ಮಾತನಾಡಿ, ನವಂಬರ್ ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ವಿಜಯನಗರ ಹೆಬ್ಬಾಗಿಲು ಬಗ್ಗೆ ನನ್ನ ಗಮನಕ್ಕೆ ಬಂತು ,ಹೆಬ್ಬಾಗಿಲು ಶಾಶ್ವತ ಕಟ್ಟಡ ನಿರ್ಮಾಣಕ್ಕೆ ಪಾಲಿಕೆ ಸಭೆ ಆನುಮೋದನೆ ಪಡೆದು ಶ್ರೀಘ್ರಗತಿಯಲ್ಲಿ ಕಾಮಗಾರಿ ಪ್ರಾರಂಭವಾಗಲಿದೆ, ಸಂಚಾರಕ್ಕೆ ಆನಾನುಕೂಲವಾಗದಂತೆ ಮುಂದಿನ ಆಕ್ಟೋಬರ್ ನಲ್ಲಿ ವಿಜಯನಗರ ಹೆಬ್ಬಾಗಿಲು ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಹೇಳಿದರು.


ಸಂಬಂಧಿತ ಟ್ಯಾಗ್ಗಳು

Sampath Raj Mysore Bank ವಾಟಾಳ್ ನಾಗರಾಜ್ ಮಹಾಪೌರ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ