ಮಕ್ಕಳು ಇಲ್ಲಿ ಓದುವುದಾದರು ಹೇಗೆ..

Kannada News

14-11-2017

ಮೈಸೂರು: ಮೈಸೂರಿನ ಟಿ.ನರಸೀಪುರದಲ್ಲಿರುವ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ, ಮೂಲಭೂತ ಸೌಲಭ್ಯಗಳಿಲ್ಲದೆ ವಿದ್ಯಾರ್ಥಿಗಳಿಗೆ ಶಾಪವಾಗಿ ಪರಿಣಮಿಸಿದೆ. ಶಾಲೆಯು ಪುರಸಭೆ ಕಸ ವಿಲೇವಾರಿ ಘಟಕದ ಪಕ್ಕದಲ್ಲಿದ್ದು, ಸುತ್ತಮುತ್ತಲೆಲ್ಲಾ ರಾಶಿ ರಾಶಿ ಹಸಿ ಕಸದಿಂದ ತುಂಬಿದ್ದು, ಕಸದಿಂದ ಶಾಲಾ ಆವರಣವೆಲ್ಲಾ ದುರ್ನಾತ ಬೀರಿತ್ತಿದೆ. ಇದರಿಂದ ಶಾಲಾ ವಿದ್ಯಾರ್ಥಿಗಳಿಗೆ ಕಸದ ರಾಶಿಯಿಂದ ಸೊಳ್ಳೆ ನೊಣ ಕ್ರಿಮಿ ಕೀಟಗಳ ಕಾಟ ಹೆಚ್ಚಾಗಿದೆ .

ಕಸ ಒಂದೆಡೆಯಾದರೆ ವಿದ್ಯಾರ್ಥಿಗಳು ಕೂತು ಪಾಠ ಪ್ರವಚನ ಕೇಳಲು ಸರಿಯಾದ ಡೆಸ್ಕು ಬೆಂಚುಗಳಿಲ್ಲದೆ, ನೆಲೆದ ಮೇಲೆಯೇ ಕುಳಿತು, ವಿದ್ಯಾರ್ಥಿಗಳು ಪಾಠ ಪ್ರವಚನಗಳನ್ನು ಕೇಳುತ್ತಿದ್ದಾರೆ. ಆರು ತಿಂಗಳ ಹಿಂದೆಯೇ ಕೆಟ್ಟು ನಿಂತಿರುವ ಸೋಲಾರ್ ಹೀಟರ್ ನ ಪರಿಣಾಮ ಕೆಲ ತಿಂಗಳುಗಳಿಂದ ಮಕ್ಕಳಿಗೆ ತಣ್ಣಿರ ಸ್ನಾನವೇ ಮಾಡುವಂತಾಗಿದೆ. ಈ ಶಾಲೆಯ ಸಮಸ್ಯೆಗಳು ಇಷ್ಟಕ್ಕೆ ಮುಗಿದಿಲ್ಲ,  ಪಟ್ಟಣದಲ್ಲಿ ಹಿಡಿದ ಬೀದಿ ನಾಯಿಗಳನ್ನು ಕಸ ವಿಲೇವಾರಿ ಘಟಕದ ಪಕ್ಕದ ನಿರ್ಜನ ಪ್ರದೇಶಕ್ಕೆ ತಂದು ಬಿಟ್ಟಿರುವ ಪುರಸಭೆ. ರಾತ್ರಿಯಾದರೆ ನಾಯಿಗಳ ಗೋಳಾಟದಿಂದ ನಿದ್ದೆ ಇಲ್ಲದೆ ವಿದ್ಯಾರ್ಥಿಗಳು ಬೇಸತ್ತಿದ್ದಾರೆ. ಇಷ್ಟೆಲ್ಲಾ ಅವ್ಯವಸ್ಥೆಗಳನ್ನು ಶಾಲಾ ಮಕ್ಕಳ ಪೋಷಕರ ಸಭೆಯಲ್ಲಿ, ಪ್ರಾಂಶುಪಾಲರು ಎಳೆ ಎಳೆಯಾಗಿ ಬಿಚ್ಚಿಟ್ಟರು.

ಸಮಸ್ಯೆಗಳ ಬಗ್ಗೆ ಸಂಬಂಧಪಟ್ಟವರಿಗೆ ಸಾಕಷ್ಟು ಬಾರಿ ದೂರು ನೀಡಿದ್ದರು ಕ್ಯಾರೆ ಎನ್ನದ ಅಧಿಕಾರಿಗಳು ನಿರ್ಲಕ್ಷ್ಯವಹಿಸಿದ್ದಾರೆ. ಇನ್ನು ಸಮಸ್ಯೆಗಳನ್ನು ಶೀಘ್ರವೇ ಪರಿಹರಿಸದಿದ್ದಲ್ಲಿ ಮಕ್ಕಳೊಟ್ಟಿಗೆ ಪ್ರತಿಭಟನೆ ನಡೆಸುವುದಾಗಿ ಪೋಷಕರು ಎಚ್ಚರಿಕೆ ನೀಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

School Students ಪುರಸಭೆ ಟಿ.ನರಸೀಪುರ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ