'ಸಿದ್ದರಾಮಯ್ಯ ತಲೆ ತಿರುಕ ಮುಖ್ಯಮಂತ್ರಿ'

Kannada News

14-11-2017

ಕಾರವಾರ: ಲ್ಯಾಪ್ ಟಾಪ್ ಹಗರಣದಲ್ಲಿ ಸಿಲುಕಿರುವ ಉನ್ನತ ಶಿಕ್ಷಣ ಸಚಿವ ಬಸವರಾಜ್ ರಾಯರೆಡ್ಡಿ ರಾಜಿನಾಮೆ ನೀಡಲಿ ಎಂದು, ಕಾರವಾರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಆಗ್ರಹಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲ್ಲೂಕಿನ ಮುರುಡೇಶ್ವರದಲ್ಲಿಂದು ಮಾತನಾಡಿದ ಅವರು, ಲ್ಯಾಪ್ ಟಾಪ್ ಖರೀದಿಯಲ್ಲಿ ಸುಮಾರು 300 ಕೋಟಿ ಹಗರಣ ನಡೆದಿದೆ, ಕೂಡಲೇ ರಾಯರೆಡ್ಡಿ ನೈತಿಕ ಹೊಣೆ ಹೊತ್ತು ರಾಜಿನಾಮೆ‌ ನೀಡಲಿ ಎಂದರು.

ಇನ್ನು ಜಾರ್ಜ್ ಮೇಲೆ ಸಿಬಿಐ ಎಫ್.ಐ.ಆರ್ ದಾಖಲಿಸಿದೆ, ಮಾನ ಮರ್ಯಾದೆ ಇರುವ ಯಾವ ಮುಖ್ಯಮಂತ್ರಿಗಳಾದರು ಜಾರ್ಜ್ ರಾಜಿನಾಮೆ ಪಡೆಯುತ್ತಿದ್ದರು, ಆದರೆ ಸಿದ್ದರಾಮಯ್ಯ ಮಾತ್ರ ರಾಜಿನಾಮೆ ಪಡೆಯುತ್ತಿಲ್ಲ‌ ಎಂದು ಟೀಕಿಸಿದ್ದಾರೆ. ರಾಜ್ಯದ ಕರಾವಳಿ ಭಾಗದಲ್ಲಿ ಉಗ್ರರು ಹೆಚ್ಚಾಗಲು ಸಿಎಂ ಸಿದ್ದರಾಮಯ್ಯನವರೇ ಕಾರಣ, ದೇಶ ವಿರೋಧಿ ಚಟುವಟಿಕೆ ಮಾಡುವ ಪಿಎಫ್ಐ ಸಂಘಟನೆಗೆ ಸಿದ್ದರಾಮಯ್ಯ ಬೆಂಬಲವಿದೆ ಎಂದು ಆರೋಪಿಸಿದರು.

ಖಾಸಗಿ ಆಸ್ಪತ್ರೆ ವೈದ್ಯರ ಪ್ರತಿಭಟನೆ ಕುರಿತು ಮಾತನಾಡಿದ ಅವರು, ಈ ಬಗ್ಗೆ ಆರೋಗ್ಯ ಸಚಿವರು ಹಾಗೂ ಮುಖ್ಯಮಂತ್ರಿ ನಡುವೆ ಬಿನ್ನಾಭಿಪ್ರಾಯವಿದೆ, ಆರೋಗ್ಯ ಸಚಿವ ರಮೇಶ್ ಕುಮಾರ್ ರಾಜೀನಾಮೆ ಕೊಡುವ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.

ಕಳೆದ ಸರ್ಕಾರದಲ್ಲಿ ವಿದ್ಯುತ್ ಖರೀದಿ ಹಗರಣಕ್ಕೆ ಸಂಬಂಧಿಸಿದಂತೆ, ಸರ್ಕಾರದಿಂದ ಮಸೂದೆ ಮಂಡನೆ ಮಾಡಲು ಮುಂದಾಗಿರುವ ವಿಚಾರದ ಕುರಿತು, ಸಿದ್ದರಾಮಯ್ಯ ತಲೆ ತಿರುಕ ಮುಖ್ಯಮಂತ್ರಿ, ಇಷ್ಟುದಿನ ತೆಪ್ಪಗಿದ್ದು ಈಗ ಸರ್ಕಾರ ಮುಗಿಯುವ ಸಂದರ್ಭದಲ್ಲಿ ಯಾಕೆ ಬೇಕಿತ್ತು ಎಂದಿದ್ದಾರೆ.

 

 


ಸಂಬಂಧಿತ ಟ್ಯಾಗ್ಗಳು

Yeddyurappa Karwar ಹಗರಣ ಬಸವರಾಜ್ ರಾಯರೆಡ್ಡಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ