ಒಂದೇ ಕುಟುಂಬದ ಮೂವರ ಸಾವು

Kannada News

14-11-2017 434

ಮೈಸೂರು: ಮೈಸೂರು-ಹುಣಸೂರು ರಸ್ತೆಯಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನು ಘಟನೆಯಲ್ಲಿ 14 ಮಂದಿಗೆ ಗಂಭೀರ ಗಾಯಗಳಾಗಿವೆ. ಮಂಗಳೂರಿನಿಂದ ಊಟಿಗೆ ಟೆಂಪೋ ಟ್ರಾವಲರ್ ನಲ್ಲಿ ತೆರಳುತ್ತಿದ್ದ ಕುಟುಂಬ, ಮಾರ್ಗಮಧ್ಯೆ ಹುಣಸೂರು ಬಳಿಯ ಬಸರಿಕಟ್ಟೆ ಬಳಿ ಲಾರಿಯನ್ನ ಓವರ್ ಟೇಕ್ ಮಾಡುವ ಸಂಧರ್ಭದಲ್ಲಿ ಭೀಕರ ಅಪಘಾತದ ಸಂಭವಿದೆ. ಅಬ್ದುಲ್ ಹಮೀದ್ (47),ಮಹಮದ್ ಇಕ್ಬಾಲ್ (37) ಹಾಗೂ ಬಾಲಕ ಶೇಕ್ ಹಕೀಬ್(11)ಮೃತ ದುರ್ದೈವಿಗಳು. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಹುಣಸೂರು ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿ, ಮುಂದಿನ ಕ್ರಮ ಕೈಗೊಂಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Tempo Traveller Accident ಹುಣಸೂರು ಅಪಘಾತ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ