ನಿಧಿ ಎಂದು ಮೋಸ ಹೋಗದಿರಿ...

Kannada News

14-11-2017 589

ತುಮಕೂರು: ನಿಧಿ ಆಸೆ ತೋರಿಸಿ ವಂಚಿಸುತಿದ್ದ ಇಬ್ಬರನ್ನು ಡಿಸಿಬಿ ಪೊಲೀಸರು ಬಂಧಿಸಿದ್ದಾರೆ. ತುಮಕೂರು ಹೊರವಲಯದ ಯಲ್ಲಾಪುರದ ನಿರ್ಜನ ಪ್ರದೇಶದಲ್ಲಿ, ರಮೇಶ್, ಹರೀಶ್ ಎಂಬುವರನ್ನು ಬಂಧಿಸಲಾಗಿದ್ದು, ಇನ್ನೊಬ್ಬ ಆರೋಪಿ ಚಂದನ್ ಪರಾರಿಯಾಗಿದ್ದಾನೆ. ಕಳೆದ ಒಂದು ತಿಂಗಳಿನಿಂದ ನಗರದ ಹಲವರಿಗೆ ನಿಧಿ ಸಿಕ್ಕಿದೆ ಎಂದು ಫೋನ್ ಮಾಡುತಿದ್ದ ಗ್ಯಾಂಗ್, ನಿರ್ಜನ ಪ್ರದೇಶಕ್ಕೆ ಜನರನ್ನು ಕರೆಸಿಕೊಂಡು, ಚಿನ್ನದ ನಾಣ್ಯ ಎಂದು ಇದ್ದಿಲು ತುಂಬಿದ ಪಾತ್ರೆ ಕೊಟ್ಟ, ಅವರಿಂದ ಲಕ್ಷಾಂತರ ಹಣ ಪಡೆಯುತ್ತಿದ್ದರು. ಈ ಕುರಿತಂತೆ ಸಾರ್ವಜನಿಕರು ನೀಡಿರುವ ದೂರು ಆಧರಿಸಿ, ಕಾರ್ಯಾಚರಣೆ ನಡೆಸಿದ ಡಿಸಿಬಿ ಪೊಲೀಸರು, ಗ್ರಾಹಕರ ವೇಷದಲ್ಲಿ ಹೋಗಿ ವಂಚಕರನ್ನು ಬಲೆಗೆ ಕೆಡವಿದ್ದಾರೆ.  


ಸಂಬಂಧಿತ ಟ್ಯಾಗ್ಗಳು

Gold Coins treasure ನಿಧಿ ಆಸೆ ಗ್ಯಾಂಗ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ