ಅನ್ನದಾತನ ಕೊಂದ ಸಾಲ....

Kannada News

14-11-2017

ಮಂಡ್ಯ:ಮಂಡ್ಯದಲ್ಲಿ ರೈತರ ಆತ್ಮಹತ್ಯೆ ಸರಣಿ ಮುಂದುವರೆದಿದೆ. ಸಾಲಬಾಧೆಗೆ ಮದ್ದೂರಿನ ರೈತ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮಂಡ್ಯದ ಮದ್ದೂರು ತಾಲ್ಲೂಕಿನ, ನೀಲಕಂಠನಹಳ್ಳಿಯ ಬಸವೇಗೌಡ(35) ಎಂದು ಮೃತ ರೈತನನ್ನು ಗುರುತಿಸಲಾಗಿದೆ. ಬಸವೇಗೌಡರು ಕೃಷಿಗಾಗಿ 5 ಲಕ್ಷ ಸಾಲ ಮಾಡಿಕೊಂಡಿದ್ದು, ಮರುಪಾವತಿಗಾಗಿ ಸಾಲಕೊಟ್ಟವರು ಕೋರ್ಟಿನಲ್ಲಿ ದಾವೆ ಹೂಡಿದ್ದರಿಂದ ಮನನೊಂದ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮದ್ದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.


ಸಂಬಂಧಿತ ಟ್ಯಾಗ್ಗಳು

Mandya Farmer suicide ವಿಷ ಸೇವಿಸಿ ಆತ್ಮಹತ್ಯೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ