ಬಸ್ಸಲ್ಲಿತ್ತು 250 ಲೀಟರ್ ಅಕ್ರಮ ಮದ್ಯ..!

Kannada News

13-11-2017

ಬೆಂಗಳೂರು: ಗೋವಾ ರಾಜ್ಯದಲ್ಲಿ ತಯಾರಾದ ಮದ್ಯವನ್ನು, ಬೆಂಗಳೂರಲ್ಲಿ ಮಾರಾಟ ಮಾಡಲು ಅಕ್ರಮವಾಗಿ ಮದ್ಯ ತರುತ್ತಿದ್ದ ಮೂವರನ್ನು ಅಬಕಾರಿ ಅಧಿಕಾರಿಗಳು ಬಂಧಿಸಿ, 191-250 ಲೀಟರ್ ಮದ್ಯ ವಶಪಡಿಸಿಕೊಳ್ಳಲಾಗಿದೆ. ಅಂಕೋಲದ ಪ್ರವೀಣ್‍ ನಾಯ್ಕ ಬಿನ್ ಪ್ರಕಾಶನಾಯ್ಕ, ಮುಕುಂದ ದತ್ತ ಖಂಡೇಕರ್ ಬಿನ್ ದತ್ತಶಂಕರ್ ಖಂಡೇಕರ್ (37), ನಾರಾಯಣ ಬಿನ್ ಅಂಜನಪ್ಪ ಸಾಸಲು ಬಂಧಿತ ಆರೋಪಿಗಳಾಗಿದ್ದಾರೆ.

ಆರೋಪಿಗಳು ಮದ್ಯವನ್ನು ಅಂಕೋಲದಿಂದ ಬೆಂಗಳೂರಿಗೆ ಪ್ರಯಾಣಿಕರನ್ನು ಸಾಗಿಸುತ್ತಿದ್ದ ಬಸ್ ನಲ್ಲಿ ಅಕ್ರಮ ಮಧ್ಯವನ್ನು ಸಾಗಾಣಿಕೆ ಮಾಡಲಾಗುತ್ತಿದೆ ಎಂಬ ಮಾಹಿತಿ ತಿಳಿದು ಗಾಂಧಿನಗರದ ಎಸ್.ಇ.ರಸ್ತೆಯಲ್ಲಿರುವ ಸೀಬರ್ಡ್ ಟ್ರಾವಲ್ಸ್ ನ ಕಚೇರಿಯ ಮುಂಭಾಗದಲ್ಲಿ ನಿಂತಿದ್ದ ಬಸ್ ಪರಿಶೀಲಿಸಿದಾಗ ಅಕ್ರಮ ಮಧ್ಯ ಪತ್ತೆಯಾಗಿದೆ. ಆರೋಪಿಗಳು ಕರ್ನಾಟಕ ಅಬಕಾರಿ ಕಾಯ್ದೆ 1965 ಕಲಂ 11,13,14 ರಡಿ ಮೊಕದ್ದಮೆಯನ್ನು ದಾಖಲಿಸಿ ಮದ್ಯದ ಜೊತೆ ಬಸ್‍ನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಬಕಾರಿ ಉಪ ಆಯುಕ್ತರು ತಿಳಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Goa Excise ಅಕ್ರಮ ಮದ್ಯ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ