ಒತ್ತುವರಿ ಜಾಗ ಜಿಲ್ಲಾಡಳಿತ ವಶ !

Kannada News

13-11-2017

ಬೆಂಗಳೂರು: ಮಾಲೀಕತ್ವ ವಿಷಯದಲ್ಲಿ ವಿವಾದ ಉಂಟಾಗಿ ಜಗಳ ನಡೆಯುತ್ತಿರುವ ಆನೇಕಲ್‍ ನ ಅಲಯನ್ಸ್ ವಿಶ್ವವಿದ್ಯಾಲಯದಿಂದ ಒತ್ತುವರಿಯಾಗಿದ್ದ 5 ಎಕರೆ ಹತ್ತು ಗುಂಟೆ ಜಾಗವನ್ನು ಜಿಲ್ಲಾಡಳಿತ ವಶಕ್ಕೆ ಪಡೆದುಕೊಂಡಿದೆ. ಬೆಂಗಳೂರು ದಕ್ಷಿಣ ಉಪವಿಭಾಗಾಧಿಕಾರಿ ಹರೀಶ್ ನಾಯಕ್ ಹಾಗೂ ಆನೇಕಲ್ ತಹಸೀಲ್ದಾರ್ ಅರವ ನೇತೃತ್ವದಲ್ಲಿ ಇಂದು ಕಾರ್ಯಾಚರಣೆ ನಡೆಸಿ ಒತ್ತುವರಿಯನ್ನು ತೆರವು ಮಾಡಿ ಭೂಮಿಯನ್ನು ವಶಪಡಿಸಿಕೊಳ್ಳಲಾಗಿದೆ.

ಒತ್ತುವರಿ ಜಾಗದಲ್ಲಿ ಆಟದ ಮೈದಾನವನ್ನು ನಿರ್ಮಿಸಲಾಗಿದ್ದು, ಆ ಜಾಗವನ್ನು ವಶಕ್ಕೆ ಪಡೆದಿರುವ ಜಿಲ್ಲಾಡಳಿತ ಈ ಮೈದಾನವನ್ನು ಬಳಸದಂತೆ ಅಲಯನ್ಸ್ ವಿಶ್ವವಿದ್ಯಾಲಯಕ್ಕೆ ನೋಟಿಸ್ ಕಳುಹಿಸಿದೆ. ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲ್ಲೂಕಿನ ಚಿಕ್ಕಹಾಗಡೆ ಗ್ರಾಮದಲ್ಲಿರುವ ಅಲಯನ್ಸ್ ವಿವಿಯ ಮಾಲೀಕತ್ವ ವಿಷಯದಲ್ಲಿ ವಿವಾದ ನ್ಯಾಯಾಲಯದಲ್ಲಿದ್ದು, ಆಗಾಗ ಸುದ್ದಿಯಾಗುತ್ತಿದೆ.

ಅಲಯನ್ಸ್ ವಿಶ್ವವಿದ್ಯಾಲಯ 2010ರಲ್ಲಿ ಖಾಸಗಿ ವಿಶ್ವವಿದ್ಯಾಲಯದ ಮಾನ್ಯತೆ ಪಡೆದಿತ್ತು. ಡಾ.ಮಧುಕರ್ ಅಂಗೂರ್ ಕುಲಪತಿಯಾಗಿದ್ದರು. ಅವರ ಸಹೋದರ ಸುಧೀರ್ ಅಂಗೂರ್ ಮತ್ತು ಸಹೋದರಿ ಶೈಲಾ ಛಬ್ಬಿ ಆಡಳಿತ ನೋಡಿಕೊಳ್ಳುತ್ತಿದ್ದರು. ಮಧುಕರ್ ಕಿರಿಯ ವಯಸ್ಸಿನ ಯುವತಿಯನ್ನು ವಿವಾಹವಾದ ಮೇಲೆ ಇವರ ನಡುವೆ ವಿವಿಯ ಆಡಳಿತಕ್ಕೆ ಸಂಬಂಧಿಸಿ ಭಿನ್ನಾಭಿಪ್ರಾಯ ಉಂಟಾಗಿತ್ತು. ಬಳಿಕ ಮಧುಕರ್ ಮೇಲೆ ಅತ್ಯಾಚಾರ ಆರೋಪಗಳು ಕೇಳಿಬಂದು ಬಂಧನಕ್ಕೊಳಗಾದರು. ಈಗ ಬಂಧನದಿಂದ ಬಿಡುಗಡೆಯಾಗಿದ್ದು, ಪ್ರಕರಣವನ್ನು ಸಿಐಡಿಗೆ ವಹಿಸಲಾಗಿದೆ. ಈ ಮಧ್ಯೆ ಮಧುಕರ್ ಅವರಿಂದ ವಿಶ್ವವಿದ್ಯಾಲಯದ ಹಣ ದುರುಪಯೋಗದ ಆರೋಪ ಕೇಳಿಬಂತು. ಇದನ್ನು ಸರ್ಕಾರ ಸಮಿತಿ ರಚಿಸಿ ತನಿಖೆ ನಡೆಸಿತ್ತು. ಸದ್ಯ ಮಧುಕರ್ ಸಹೋದರ ಸುಧೀರ್ ಅಂಗೂರ್ ವಿಶ್ವವಿದ್ಯಾಲಯದ ಕುಲಪತಿಯಾಗಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Alliance University Anekal ಒತ್ತುವರಿ ತಹಸೀಲ್ದಾರ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ