ಗೌರಿ ಲಂಕೇಶ್ ಸಹೋದರಿ ಗರಂ !

Kannada News

13-11-2017

ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಹಂತಕರ ಪತ್ತೆ ಕಾರ್ಯ ವಿಳಂಬವಾಗುತ್ತಿರುವುದಕ್ಕೆ ಅವರ ಸಹೋದರಿ ಕವಿತಾ ಲಂಕೇಶ್ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಗರದ ಮಲ್ಲೇಶ್ವರಂನಲ್ಲಿ ತಮ್ಮ ಮುಂದಿನ ಚಿತ್ರ, ಸಮ್ಮರ್ ಹಾಲಿಡೇಸ್ ಚಿತ್ರದ ಟ್ರೇಲರ್ ಬಿಡುಗಡೆಯ ನಂತರ ಮಾತನಾಡಿದ ಕವಿತಾ ಅವರು, ಗೃಹ ಸಚಿವ ರಾಮಲಿಂಗ ರೆಡ್ಡಿ ಅವರು ಕಳೆದ ಎರಡು ತಿಂಗಳಿನಿಂದ ಎರಡು ವಾರದಲ್ಲಿ ತನಿಖೆ ಮುಗಿಯಲಿದೆ ಎಂದು ಹೇಳುತ್ತಿದ್ದಾರೆ. ಆದರೆ ತನಿಖೆ ಬಗ್ಗೆ ಯಾವುದೇ ಸ್ಪಷ್ಟನೆ ಸಿಕ್ಕಿಲ್ಲ ಎಂದರು.

ಸಹೋದರಿ ಗೌರಿ ಲಂಕೇಶ್ ಅವರನ್ನು ನೆನೆದು ಭಾವುಕರಾದ ಕವಿತಾ, ಗೃಹ ಸಚಿವರ ಮೇಲೆ ನಂಬಿಕೆ ಇಡ್ಬೇಕಾ ಬೇಡ್ವಾ ಅನ್ನುವ ಅನುಮಾನ ಕಾಡುತ್ತಿದೆ ಎಂದರು. ಎಸ್‍ಐಟಿ ತನಿಖಾಧಿಕಾರಿ ಬಿಕೆ ಸಿಂಗ್ ಅವರು ಇನ್ನು 2 ವಾರಗಳಲ್ಲಿ ತನಿಖೆ ಪೂರ್ಣಗೊಳ್ಳುತ್ತದೆ ಎಂದು ತಿಳಿಸಿದ್ದಾರೆ. ಅವರ ಹೇಳಿಕೆ ಹಿನ್ನೆಲೆ ನಂಬಿಕೆ ಬಂದಿದೆ ಎಂದು ಹೇಳಿದರು.

ತಮ್ಮ ಸಮ್ಮರ್ ಹಾಲಿಡೇಸ್ ಸಿನೆಮಾದಲ್ಲಿ ಗೌರಿ ಲಂಕೇಶ್ ಸಾಮಾಜಿಕ ಹೋರಾಟಗಾರ್ತಿಯ ಸಣ್ಣ ಪಾತ್ರವನ್ನು ಮಾಡಿದ್ದಾರೆ. ನಿಜ ಜೀವನದಲ್ಲೂ ಅವರು ಹಾಗೆಯೇ ಇದ್ದರು. ಅವರ ಸಾಮಾಜಿಕ ಹೋರಾಟವೇ ಅವರ ಪ್ರಾಣಕ್ಕೆ ಕಂಟಕವಾಗುತ್ತದೆ ಎಂದು ತಿಳಿದಿರಲಿಲ್ಲ, ನಮ್ಮ ತಂದೆ ಲಂಕೇಶ್ ಅವರು ಸರ್ಕಾರ ವಿರುದ್ಧ ಹಲವು ಬರಹಗಳನ್ನು ಪ್ರಕಟಿಸಿದ್ದರು ಎಂದು ನೆನಪಿಸಿಕೊಂಡರು.

ನಿಮಗೆ ಹಾಗೂ ಸಹೋದರ ಇಂದ್ರಜಿತ್ ಲಂಕೇಶ್ ಅವರಿಗೆ ಯಾವುದಾದರು ಜೀವ ಬೆದರಿಕೆ ಕುರಿತ ಪ್ರಶ್ನೆಗೆ ಉತ್ತರಿಸದ ಅವರು, ನಮಗೆ ಇಂತಹ ಯಾವುದೇ ಜೀವ ಬೆದರಿಕೆ ಇಲ್ಲ, ಆದರೆ ಗೌರಿ ಹತ್ಯೆ ನಂತರ ಅತಂಕಕ್ಕೆ ಒಳಗಾಗಿದ್ದೇವೆ ಎಂದು ತಿಳಿಸಿದರು.

 


ಸಂಬಂಧಿತ ಟ್ಯಾಗ್ಗಳು

Kavitha Lankesh journalist ಅಸಮಾಧಾನ ಸಾಮಾಜಿಕ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ