ಮಧ್ಯರಾತ್ರಿ ಕಿರಿಕ್: ಕಾರು ಜಖಂ

Kannada News

13-11-2017

ಬೆಂಗಳೂರು: ನಗರದ ಸಂಪಿಗೆಹಳ್ಳಿಯ ಕೋಗಿಲು ಲೇಔಟ್‍ನಲ್ಲಿ ನಿನ್ನೆ ಮಧ್ಯರಾತ್ರಿ ಕಾರು ನಿಲ್ಲಿಸಿದ್ದ ವಿಚಾರವಾಗಿ ಜಗಳ ಉಂಟಾಗಿ, ಮೂವರು ಓರ್ವನ ಮೇಲೆ ಹಲ್ಲೆ ನಡೆಸಿ ಕಾರು ಜಖಂಗೊಳಿಸಿರುವ ದುರ್ಘಟನೆ ನಡೆದಿದೆ. ಗಾಯಗೊಂಡಿರುವ ಸಂಪಿಗೆಹಳ್ಳಿಯ ಅಬ್ದುಲ್ ಖಾನ್ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕೋಗಿಲು ಲೇಔಟ್‍ನ ರಹಮಾನ್ ಮಸೀದಿ ಬಳಿ ರಾತ್ರಿ 12.15ರ ವೇಳೆ ಅಬ್ದುಲ್ ಖಾನ್ ಕಾರು ನಿಲ್ಲಿಸುತ್ತಿದ್ದರು.

ಅಲ್ಲಿನ ನಿವಾಸಿಗಳಾದ ನವಾಬ್, ಷಫಿ ಹಾಗೂ ತಬ್ರೇಜ್ ಕಾರು ನಿಲ್ಲಿಸಬೇಡ ಎಂದು ಹೇಳಿದರೂ ಅಬ್ದುಲ್ಲಾ ಅದನ್ನು ಲೆಕ್ಕಿಸದೇ ಹೋಗುತ್ತಿದ್ದ ಅಬ್ದುಲ್ ಜೊತೆ ಜಗಳ ತೆಗೆದು ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಪ್ರಕರಣ ದಾಖಲಿಸಿರುವ ಸಂಪಿಗೆಹಳ್ಳಿ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Bengaluru Attack ಹಲ್ಲೆ ಕಾರು ಜಖಂ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ