ನಗರದಲ್ಲಿ ಯುವತಿಯರ ಗ್ಯಾಂಗ್‍ನಿಂದ ಸುಲಿಗೆ

Kannada News

04-04-2017

ಬೆಂಗಳೂರು : ಹನಿಟ್ರ್ಯಾಪ್‍ನ ದೊಡ್ಡ ಜಾಲದ ಒಂದೊಂದೇ ಪ್ರಕರಣಗಳು ಬಯಲಾಗುತ್ತಿರುವ ಬೆನ್ನಲ್ಲೇ ನಗರದಲ್ಲಿ ಯುವತಿಯರ ಗ್ಯಾಂಗ್‍ವೊಂದು ಸುಲಿಗೆ ನಡೆಸುತ್ತಿರುವ ಪ್ರಕರಣ ಬೆಳಕಿಗೆ ಬಂದಿರುವುದು ಆತಂಕ ಉಂಟುಮಾಡಿದೆ.
ಯುವತಿಯ ಗ್ಯಾಂಗ್‍ನಿಂದ ಸುಲಿಗೆ ಗೊಳಗಾಗಿರುವ ಇಂದಿರಾನಗರ ವ್ಯಕ್ತಿಯೊಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ.ಹೊಸಕೋಟೆಯ ಸಂಬಂಧಿ  ಮನೆಗೆ ತೆರಳಿ ವಾಪಾಸಾಗುವ ವೇಳೆ ಇಂದಿರಾ ನಗರದ 12 ನೇ ಮುಖ್ಯರಸ್ತೆಯ ಸಿಗ್ನಲ್‍ನಲ್ಲಿ ನಿಂತ ವೇಳೆ ಇಬ್ಬರು ಯುವತಿಯರು ನನ್ನನ್ನು ವಂಚಿಸಿದ್ದಾರೆ.
ಒಬ್ಬಾಕೆ  ನನ್ನತ್ತ ಮಾದಕ ನೋಟ ಬೀರಿದರೆ ಇನ್ನೊಬ್ಬಳು ಏಕಾಏಕಿ ನನ್ನ ಕಾರಿನಲ್ಲಿ ಬಂದು ಕುಳಿತಳು.ನನ್ನನ್ನು ತಬ್ಬಿಕೊಂಡು ,ಅಸಹ್ಯವಾಗಿ ವರ್ತಿಸಿ ಲೈಂಗಿಕ ಕ್ರಿಯೆಗಾಗಿ ನಿರ್ಜನ ಪ್ರದೇಶಕ್ಕೆ ತೆರಳುವಂತೆ ಒತ್ತಾಯಿಸಿದಾಗ ಒಪ್ಪದ ನನಗೂ ಅವರಿಗೂ ಜಗಳವಾಗಿದ್ದು ಈ ವೇಳೆ ನನ್ನನ್ನು ಬೆದರಿಸಿ ಚಿನ್ನಾಭರಣ ,ಹಣವನ್ನು ದೋಚಿ ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ಹೇಳಿಕೊಂಡಿದ್ದಾರೆ.
ಪೊಲೀಸರು ದೂರು ನೀಡಿದ ಮೊದಲಿಗೆ ಅವರು ಮಂಗಳಮುಖಿಯರು ಎಂದು ನಿರ್ಲಕ್ಷ್ಯ ವಹಿಸಿದ್ದು,ನಂತರ ದೂರು ನೀಡಿದ ವ್ಯಕ್ತಿ ನೀಡಿದ ಮಾಹಿತಿ ಕಲೆಹಾಕಿ ಸೂಕ್ಷ್ಮವಾಗಿ ಪರಿಶೀಲಿಸಿದಾಗ ಯುವತಿರ ಗ್ಯಾಂಗ್ ಕೃತ್ಯ ಎನ್ನುವುದು ಗೊತ್ತಾಗಿದೆ ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆಗೆ ಮುಂದಾಗಿದ್ದಾರೆ.

Links :ಸಂಬಂಧಿತ ಟ್ಯಾಗ್ಗಳು

ಸಂಬಂಧಿತ ಟ್ಯಾಗ್ಗಳನ್ನು ಲಭ್ಯವಿಲ್ಲಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ