ಉಭಯ ಸದನಗಳಲ್ಲಿ ಸಂತಾಪ ಸೂಚನೆ !

Kannada News

13-11-2017

ಬೆಳಗಾವಿ: ಮಾಜಿ ಮುಖ್ಯಮಂತ್ರಿ ಎನ್.ಧರ್ಮಸಿಂಗ್, ಹಾಲಿ ಶಾಸಕರಾಗಿದ್ದ ಖಮರುಲ್ಲಾ ಇಸ್ಲಾಂ, ಚಿಕ್ಕಮಾದು, ಬಾಹ್ಯಾಕಾಶ ವಿಜ್ಞಾನಿ ಪ್ರೊ.ಯು.ಆರ್.ರಾವ್, ಪತ್ರಕರ್ತೆ ಗೌರಿಲಂಕೇಶ್ ಸೇರಿದಂತೆ 14 ಮಂದಿಗೆ ವಿಧಾನಸಭೆ ಮತ್ತು ವಿಧಾನಪರಿಷತ್‍ನಲ್ಲಿ ಭಾವಪುರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಕಲಾಪ ಮೊದಲ ದಿನವಾದ ಇಂದು ಆರಂಭದಲ್ಲಿ ಸಭಾಧ್ಯಕ್ಷ ಕೋಳಿವಾಡ ಅವರು ವಿಧಾನಸಭೆಯಲ್ಲಿ ಹಾಗೂ ವಿಧಾನಪರಿಷತ್‍ನಲ್ಲಿ ಸಭಾಪತಿ ಡಿ.ಎಚ್.ಶಂಕರಮೂರ್ತಿ ಅವರು ಸಂತಾಪ ಸೂಚಕ ನಿರ್ಣಯವನ್ನು ಮಂಡಿಸಿದರು.

ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್, ಹಾಲಿ ಶಾಸಕರಾಗಿದ್ದ ಖಮರುಲ್ಲಾ ಇಸ್ಲಾಂ, ವಿಧಾನಪರಿಷತ್ ಸದಸ್ಯರಾಗಿದ್ದ ಎಸ್.ಚಿಕ್ಕಮಾದು, ಮಾಜಿ ಸಚಿವ ಪೋತದಾರ ರಾಮಭಾವು ಭೀಮರಾವ್, ಮಾಜಿ ಶಾಸಕರಾದ ವಿದ್ಯಾಧರ ಗುರೂಜಿ, ಸಿದ್ದನಗೌಡ ಸೋಮನಗೌಡ ಪಾಟೀಲ್, ಬಿ.ಬಿ.ಶಿವಪ್ಪ, ಜಯಪ್ರಕಾಶ ಶೆಟ್ಟಿ ಕೊಳ್ಕೆಬಯಲು, ಬಿ.ಜಿ.ಕೊಟ್ರಪ್ಪ, ಬಾಹ್ಯಾಕಾಶ ವಿಜ್ಞಾನಿ ಪ್ರೊ.ಯು.ಆರ್.ರಾವ್, ಯಕ್ಷಗಾನ ಕಲಾವಿದ ಚಿಟ್ಟಾಣಿ ರಾಮಚಂದ್ರ ಹೆಗಡೆ, ಹಿರಿಯ ರಂಗಕರ್ಮಿ ಏಣಗಿ ಬಾಳಪ್ಪ, ಪತ್ರಕರ್ತೆ ಗೌರಿಲಂಕೇಶ್, ಖಾದ್ರಿ ಎಸ್.ಅಚ್ಚುತನ್ ಅವರುಗಳಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲು ಸಂತಾಪ ಸೂಚಕ ಮಂಡಿಸಿದರು.


ಸಂಬಂಧಿತ ಟ್ಯಾಗ್ಗಳು

Assembly legislative council ಸಂತಾಪ ಶ್ರದ್ಧಾಂಜಲಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ