‘ಗೋರಿಯಲ್ಲಿರುವವರ ಬಗ್ಗೆ ಚರ್ಚೆ ಬೇಡ’

Kannada News

13-11-2017

ಬೆಳಗಾವಿ: ಸದನ ರಾಜ್ಯದ ಸಮಸ್ಯೆಗಳ ಚರ್ಚೆಗೆ ಸೂಕ್ತ ವೇದಿಕೆಯಾಗಬೇಕೆ ಹೊರತು ಸತ್ತು ಗೋರಿಯಲ್ಲಿದ್ದವರ ಚರ್ಚೆಯ ತಾಣವಾಗಬಾರದು ಎಂದು ಸಚಿವ ಯು.ಟಿ.ಖಾದರ್ ಹೇಳಿದರು. ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 10 ದಿನಗಳ ಕಾಲ ನಡೆಯಲಿರುವ ಚಳಿಗಾಲದ ಅಧಿವೇಶನ ಅರ್ಥಪೂರ್ಣವಾಗಿರಬೇಕು. ರಾಜ್ಯದ ಸಮಸ್ಯೆಗಳ ಬಗ್ಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳಬೇಕು. ಇದನ್ನು ಬಿಟ್ಟು ಯಾರು ಸತ್ತಿದ್ದಾರೆ, ಯಾರು ಗೋರಿಯಲ್ಲಿದ್ದಾರೆ ಎಂಬ ಬಗ್ಗೆ ಮಾತನಾಡಿ ಸಮಯ ಹಾಳು ಮಾಡಬಾರದು, ಈ ರೀತಿ ಬಿಜೆಪಿಯವರು ಮಾಡುವ ಕಾಯಕ ಖಂಡನೀಯ ಎಂದು ಯು.ಟಿ.ಖಾದರ್ ಹೇಳಿದರು.


ಸಂಬಂಧಿತ ಟ್ಯಾಗ್ಗಳು

U.T.Khader Belagavi ಸುದ್ದಿಗಾರ ಚಳಿಗಾಲ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ